.

ಶಿವಮೊಗ್ಗ, ಫೆ.17: ಸಿಪ್ಪೆಗೋಟು ಅಡಿಕೆ ಖರೀದಿಗೆ ಹಣ ತೆಗೆದುಕೊಂಡು ಬನ್ನಿ ಎಂದ ಹೇಳಿ ಗುಡ್ಡದಹರಕೆರೆಯ ಬಳಿ ಗೋದಾಮು ತೋರಿಸಿ ಇಲ್ಲೇ ಅಡಿಕೆ ಇರೋದು ಒಬ್ವರು ಬರ್ತಾರೆ ತಾಳಿ ಎಂದು ನಂಬಿಸಿ ಆರು ಜನರ ಗುಂಪು ಹಣ ತಂದವರ ಮೇಲೆ ಬೆತ್ತದ ಮೂಲಕ ಹೊಡೆದು 5 ಲಕ್ಷರೂ ದರೋಡೆ ನಡೆಸಿದ್ದ ಗ್ಯಾಂಗನ್ನ ತುಂಗಾ ನಗರದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.


ಸಿಪ್ಪೇಗೋಟು ಅಡಿಕೆ ಇದೆ. ಖರೀದಿಸುತ್ತೀರಾ ಎಂದು ಸುರೇಶ್ ನ ವಾಹನವನ್ನ ಹೊಳೆಹೊನ್ನೂರು ರಸ್ತೆಯಲ್ಲಿ ಅಡ್ಡಕಟ್ಟಿ ಕೇಳಿದ್ದ ಅಪರಿಚಿತನೋರ್ವ ನಂತರ ಮೊಬೈಲ್ ನಂಬರ್ ಕೊಟ್ಟಿದ್ದನು. ಫೆ.6 ರಂದು ಶಿವಮೊಗ್ಗಕ್ಕೆ ಬಂದಿದ್ದ ಸುರೇಶ್ ಮತ್ತು ಸಂತೋಷ್ ನಿಗೆ ಗುಡ್ಡದ ಹರಕೆರೆಗೆ ಕರೆದುಕೊಂಡು ಹೋಗಿ ಒಬ್ಬರು ಬರ್ತಾರೆ ಅವರ ಬಳಿ ಮಾತನಾಡೋಣವೆಂದು ಹೇಳಿ ನಟಿಸಿ ಬೈಕಿನಲ್ಲಿ ಬಂದಿದ್ದ 6 ಜನರ ಜೊತೆ ಸೇರಿ ಬೆತ್ತದಲ್ಲಿ ಹೊಡೆದು ಸುರೇಶ್ ಬಳಿ ಇದ್ದ 5 ಲಕ್ಷ ರೂ.ವನ್ನ ಕಿತ್ತಿಕೊಂಡು ಹೋಗಿದ್ದರು.


ಫೆ.09 ರಂದು ಪ್ರಕರಣ ದಾಖಲಾಗಿತ್ತು.
ದಿನಾಂಕಃ-06-02-2023 ರಂದು ಬೆಳಗ್ಗೆ ಸಿಪ್ಪೆಗೋಟು ಅಡಿಕೆಯನ್ನು ಖರೀದಿ ಮಾಡಲು ಹಣವನ್ನು ತೆಗೆದುಕೊಂಡು ಬಂದಿದ್ದ ಸುರೇಶ್ ಕುಮಾರ್, 30 ವರ್ಷ, ಬಾಳೆಹೊನ್ನೂರು, ಚಿಕ್ಕಮಗಳೂರು ರವರಿಗೆ, ಅಡಿಕೆಯು ಶಿವಮೊಗ್ಗ ನಗರದ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿರುವ ಗೋಡೌನ್ ನಲ್ಲಿ ಇದೆ, ಬನ್ನಿ ತೋರಿಸುತ್ತೇನೆ ಎಂದು ಹೇಳಿದ್ದರಿಂದ, ಸುರೇಶ್ ಕುಮಾರ್ ಮತ್ತು ಸ್ನೇಹಿತನಾದ ಸಂತೋಷ್ ರವರು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೆಸಿಟ್ ಕಾಲೇಜು ಹತ್ತಿರ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿ ಹೋದಾಗ ಅಪರಿಚಿತ ವ್ಯಕ್ತಿಗಳು ಇವರ ಮೇಲೆ ಹಲ್ಲೆ ಮಾಡಿ, ರೂ 5,00,000/- ಹಣವನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0054/2023 ಕಲಂ 395 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಹಚ್ಚಲು ಮಿಥುನ್ ಕುಮಾರ್ ಜಿಕೆ, ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಬಾಲರಾಜ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಮಂಜುನಾಥ್, ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ, ರಾಜುರೆಡ್ಡಿ ಬೆನ್ನೂರು, ಪೊಲೀಸ್ ಉಪ ನಿರೀಕ್ಷಕರು, ಮನೋಹರ್ ಸಹಾಯಕ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್ ಹಾಗೂ ಸಿಪಿಸಿ ನಾಗಪ್ಪ ಅಡಿವಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ ಮತ್ತು ಹರೀಶ್ ರವರುಗಳನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿರುತ್ತದೆ.


ಸದರಿ ತನಿಖಾ ತಂಡವು ಪ್ರಕಣದ ಆರೋಪಿತರಾದ 1) ಮಂಜನಾಯ್ಕ @ ಮಂಜು, 35 ವರ್ಷ, ಗೋಪಾಳ ಶಿವಮೊಗ್ಗ, 2) ಆಸೀಫ್ ವುಲ್ಲಾ @ ಆಸೀಪ್, 32 ವರ್ಷ, ಶಿಕಾರಿಪುರ ಟೌನ್, 3) ಗಣೇಶ್ ನಾಯ್ಕ @ ಗಣು, 28 ವರ್ಷ, ಕೊನಗವಳ್ಳಿ, ಶಿವಮೊಗ್ಗ, 4) ದಾವಲ್ ಬಡಗಿ, 35 ವರ್ಷ, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ಮತ್ತು 5) ರಿಜ್ವಾನ್ ಅಹ್ಮದ್ @ ಮಹ್ಮದ ರಿಜ್ವಾನ್, 48 ವರ್ಷ, ಆರ್.ಎಮ್.ಎಲ್. ನಗರ, ಶಿವಮೊಗ್ಗ ರವರುಗಳನ್ನು ಬಂಧಿಸಿ ಆರೋಪಿತರಿಂದ ರೂ 3,15,000/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 03 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!