ಸಮಾಜ ಸುಧಾರಣೆಯೇ ಪತ್ರಿಕೋದ್ಯಮದ ಮುಖ್ಯ ಉದ್ದೇಶವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಹೇಳಿದರು.
ಅವರು ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯು ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.


ಸಮಾಜದ ಸ್ವಾಸ್ಥ್ಯಕ್ಕೆ ಪತ್ರಿಕೋದ್ಯಮ ತುಂಬಾ ಮುಖ್ಯವಾಗುತ್ತದೆ. ಪತ್ರಿಕೆಗಳು ಇಲ್ಲದಿ ದ್ದರೆ ಈ ಸಮಾಜದಲ್ಲಿ ಅಶಾಂತಿ ಮೂಡುತ್ತಿತ್ತು. ಯಾರು ಏನು ಬೇಕಾದರೂ ಮಾಡಬಹುದಿತ್ತು. ಭಯದ ವಾತಾವರಣವೇ ಇರುತ್ತಿರಲಿಲ್ಲ. ಆದರೆ ಪತ್ರಿಕೆಗಳು ಒಂದು ರೀತಿಯಲ್ಲಿ ಸಮಾಜದ ಅಂಕುಶದಂತೆ ಕೆಲಸ ಮಾಡುತ್ತಿವೆ. ಸಮಾಜವನ್ನು ಎಚ್ಚರಿಸುವ ಶಕ್ತಿ ಪತ್ರಿಕೆಗಳಿಗಿದೆ ಎಂದರು.
ಪತ್ರಕರ್ತರು ಎಂದರೆ ಅವರು ಪುಣ್ಯಶಾಲಿ ಗಳು. ಆದರೆ ಅವರು ಸದಾ ಅಧ್ಯಯನ ಮಾಡ ಬೇಕು. ವರ್ತಮಾನಕ್ಕೆ ತಕ್ಕಂತೆ ತಾಂತ್ರಿಕತೆಗಳಿಗೆ ಬದಲಾಣೆಯಾಗಬೇಕು. ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತಿದೆ. ಅದು ಪತ್ರಕರ್ತರಿಗೆ ಸರಿಯಾಗಿ ಅನ್ವಯವಾಗುತ್ತದೆ. ಎಲ್ಲಾ ಧರ್ಮ, ಮತ, ಪಂಥಗಳನ್ನು ಮೀರಿ ಅವರು ಬೆಳೆಯ ಬೇಕು. ಬಸವಣ್ಣನವರ ಅನುಭವ ಮಂಟಪ ದಂತೆ ಪತ್ರಿಕೋದ್ಯಮ ಇರಬೇಕು ಎಂದರು.
ನಡೆ-ನುಡಿ ಸರಿಯಾಗಿ ಇರುವುದೇ ಮಾಧ್ಯ ಮದ ಮೂಲ ಉದ್ದೇಶವಾಗಬೇಕು. ಅದು ಜ್ಞಾನದ ಜೊತೆಗೆ ಸಮ ಸಮಾಜದ ಮತ್ತು ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕು. ಹೇಳಿಕೇಳಿ ಶಿವಮೊಗ್ಗ ಜಿಲ್ಲೆ ಸಾಧಕರ ನಾಡಾ ಗಿದೆ. ಇಲ್ಲಿ ಪತ್ರಿಕೋದ್ಯಮ ಕೂಡ ಬಲಿಷ್ಠವಾ ಗಿದೆ. ಶಿವಮೊಗ್ಗ ಜಿಲ್ಲೆಗೆ ೧೩ ಪ್ರಶಸ್ತಿಗಳು ಬಂದಿ ರುವುದು ನಿಜಕ್ಕೂ ಶ್ಲಾಘನೀಯ ಎಂದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಮಾತ ನಾಡಿ, ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ. ಕಲಿಯುವುದು ಕೊನೆಯವರೆಗೂ ಇರುತ್ತದೆ. ಪರ್ತಕರ್ತರು ಕಲಿಸುತ್ತಾ, ಕಲಿಯುತ್ತಾ ಸಾಗಬೇಕು. ನ್ಯಾಯಾಂಗ ಮತ್ತು ಪತ್ರಿಕೋದ್ಯ ಮಕ್ಕೆ ಸಂಬಂಧವೂ ಇದೆ. ಪತ್ರಕರ್ತರು ಏನು ಬರೆಯಬೇಕು, ಏನು ಬರೆಯಬಾರದು, ಕಾನೂನಿನ ತೊಡಕುಗಳೇನು ಎಂಬುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾನೂನು ಪ್ರಾಧಿಕಾರ ಮುಂದಿನ ದಿನಗಳಲ್ಲಿ ಪತ್ರಕರ್ತರಿ ಗಾಗಿ ವಿಶೇಷ ಕಾರ್ಯಾಗಾರ ಒಂದನ್ನು ಹಮ್ಮಿಕೊಳ್ಳಲಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿ ರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ. ಶಿವಮಕುಮಾರ್ ಮಾತನಾಡಿ, ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಅಭಿನಂದ ನೆಗಳು. ಪ್ರಶಸ್ತಿ ನೀಡಿಕೆಗೆ ಸಂಬಂಧಿಸಿದಂತೆ ಹಲವರಲ್ಲಿ ಗೊಂದಲಗಳು ಮೂಡಿರಬಹುದು. ಆದರೆ ಎಲ್ಲರಿಗೂ ಪ್ರಶಸ್ತಿ ನೀಡಲು ಆಗುವು ದಿಲ್ಲ. ಆಯ್ಕೆಗೂ ಮಾನದಂಡಗಳಿವೆ. ಮುಂದಿನ ದಿನಗಳಲ್ಲಿ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಆ ಬಗ್ಗೆ ಯಾರೂ ಬೇಸರಪಡದೆ ಪ್ರಶಸ್ತಿ ಪಡೆದವರನ್ನು ಅಭಿನಂದಿಸಿ ಎಂದರು.


ಈ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ಜಿ.ಹೆಚ್. ವೆಂಕಟೇಶ್, ಭಂಡಿಗಡಿ ನಂಜುಂಡಪ್ಪ, ಎನ್.ಡಿ.ಶಾಂತಕು ಮಾರ್, ಅರವಿಂದ ಅಕ್ಲಾಪುರ, ದೀಪಕ್ ಸಾಗರ್, ಆಂದೋಲನ ಪ್ರಶಸ್ತಿ ಪುರಸ್ಕೃತ ನಾವಿಕ ಪತ್ರಿಕೆಯ ಸಂಪಾದಕಿ ಲತಾ ರಂಗ ಸ್ವಾಮಿ, ವಿಶೇಷ ಪುಟವಿನ್ಯಾಸ ರಾಜ್ಯ ಸಂಘದ ಪ್ರಶಸ್ತಿ ಪಡೆದ ಎಸ್.ಆರ್. ರೋಹಿತ್, ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಂದ್ಯಪುರುಷ ಪ್ರಶಸ್ತಿ ಪಡೆದ ಲೋಹಿತ್ ಅವರನ್ನು ನ್ಯಾಯಾಧೀಶರು ಸನ್ಮಾನಿಸಿದರು.
ಶಾಂತಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕ ರ್ತರ ಸಂಘದ ನಿರ್ದೇಶಕ ಎನ್.ರವಿಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ವೈದ್ಯ ಸ್ವಾಗತಿಸಿ ನಿರೂಪಿಸಿದರೆ, ಜಿಲ್ಲಾ ಉಪಾಧ್ಯಕ್ಷ ಆರ್.ಎಸ್. ಹಾಲಸ್ವಾಮಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!