ಜಂಗಮ ಮಹಿಳಾ ಸಮಾಜದ ೪ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಫೆ.೭ರ ಸಂಜೆ ೫.೩೦ಕ್ಕೆ ವಿನೋಬನಗರದ ಮುಖ್ಯ ರಸ್ತೆಯಲ್ಲಿರುವ ಶಿವಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಂಗಮ ಮಹಿಳಾ ಸಮಾ ಜದ ಅಧ್ಯಕ್ಷೆ ಸುಜಯಾಪ್ರಸಾದ್ ತಿಳಿಸಿದರು.


ಅವರು ಇಂದು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಸಮಾ ಜದ ವತಿಯಿಂದ ಕಳೆದ ೩ ವರ್ಷ ಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಬಾರಿಯ ವಾರ್ಷಿಕೋತ್ಸವದಲ್ಲಿ ಲಿಂ|| ಸಿ.ಎಂ.ಪಂಚಾಕ್ಷರಯ್ಯ ಅವರ ಸ್ಮರಣಾರ್ಥ ೨೦೨೧-೨೨ನೇ ಸಾಲಿನ ಪಿಯುಸಿ ಮತ್ತು ಎಸ್‌ಎಸ್ ಎಲ್‌ಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಮಹಿಳೆಯರಿಗೆ ಸನ್ಮಾನಿಸಲಾಗು ವುದು ಎಂದರು.


ಚಿ|ಲಿಂ|| ರಜತ್ ಕುಮಾರ್ ರವರ ಸ್ಮರಣಾರ್ಥ ೫ ಸುವರ್ಣ ದಂಪತಿಗಳಿಗೆ ಸನ್ಮಾನ ಮತ್ತು ಲಿಂ|| ಶ್ರೀಮತಿ ಸಿದ್ಧಮ್ಮ ಮತ್ತು ಲಿಂ|| ರುದ್ರಯ್ಯನವರ ಸ್ಮರಣಾರ್ಥ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಶೇ.೧೦೦ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಬಹು ಮಾನ ವಿತರಿಸಲಾಗುವುದು ಎಂದರು.
ವಾರಣಾಸಿಯ ಶ್ರೀ ಕಾಶಿ ಮಹಾಪೀಠದ ಶ್ರೀ ಡಾ.ಚಂದ್ರ ಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಬಿಳಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸಮಾರಂಭವನ್ನು ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾg.ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದರು.


ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಶೈಲಜಾ ಜಯ ದೇವಯ್ಯ, ಉಪಾಧ್ಯಕ್ಷೆ ಬಿ. ಗಿರಿಜಮ್ಮ, ಖಜಾಂಚಿ ಪಿ.ಸುಲೋ ಚನಮ್ಮ, ನಿರ್ದೇಶಕರಾದ ಹೆಚ್.ಎಂ.ಸುಮಿತ್ರ, ಸುನಂದ ಹಿರೇಮಠ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!