
ಸುದ್ದಿ, ಮತ್ತು ಜಾಹೀ944825683183


ಶಿವಮೊಗ್ಗ, ಜ.25:
ಶಿವಮೊಗ್ಗ ಜಿಲ್ಲೆಯ ಮೂಲದಿಂದ ಆರಂಭಗೊಂಡ ನ್ಯೂ ಹಾಟ್ ವೀಲ್ ಸ್ಕೇಟಿಂಗ್ ಸಂಸ್ಥೆಯು ರಾಷ್ಟ್ರೀಯ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನುಕೊಡುಗೆಯಾಗಿ ನೀಡುತ್ತಲೇ ಬಂದಿದೆ.
ಈ ಸಂಸ್ಥೆ ಪ್ರಸಕ್ತ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಹತ್ತು ಹಲವು ಬಹುಮಾನಗಳನ್ನು ಪಡೆದಿದೆ. ವಿಶೇಷವೆಂದರೆ ನಾಳಿನ ಗಣರಾಜ್ಯೋತ್ಸವ ಸಮಾರಂಭದಲ್ಲಿ ನ್ಯೂ ಹಾಟ್ ವೀಲ್ ಸ್ಕೇಟಿಂಗ್ ನ ನಿಕುಂಜ್ ಮತ್ತು ರಿಶಿಕೇಶ್ ಇವರುಗಳಿಗೆ ರಾಷ್ಟ್ರೀಯ ಸ್ಕೇಟಿಂಗ್ ನಲ್ಲಿ ಪ್ರಶಸ್ತಿ ಪಡೆದಿರುವ ಪ್ರಯುಕ್ತ ಪೋಲೀಸ್ ಗ್ರೌಂಡ್ ನಲ್ಲಿ ಕಾರ್ಯಕ್ರಮದಲ್ಲಿ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದಾರೆ.
ಅವತ್ತೇ ಶಿವಮೊಗ್ಗ ಸ್ಮಾರ್ಟ್ ಮಾಡಿದ್ದ ಎಲ್. ಸತ್ಯನಾರಾಯಣ | Shivamogga | ಕರ್ನಾಟಕ ಕುರುಕ್ಷೇತ್ರ 2023 | LIVE
ಯುಟ್ಯೂಬ್
https://youtu.be/ZQYeIyFK3ps
ಫೇಸ್
https://fb.watch/igTkfGpASJ/
ಶಿವಮೊಗ್ಗದ ಏಕೈಕ ವೃತ್ತಿಪರ ಕೇಬಲ್ ವಾಹಿನಿ
https://www.youtube.com/@KannadaMediumNews
ಆಪ್ – https://play.google.com/store/apps/details?id=com.codebliss.km_tv_app
ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹಾಗೂ ಮಾಜಿ ಉಪಮುಖ್ಯಮಂತ್ರಿ, ಶಾಸಕರಾದ ಕೆ.ಎಸ್. ಈಶ್ವರಪ್ಪ ಮತ್ತು ಸಂಸದ ಬಿ ವೈ ರಾಘವೇಂದ್ರ ಅಂತೆಯೇ ಶಿವಮೊಗ್ಗ ಜಿಲ್ಲೆಯ ಶಾಸಕರುಗಳಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಅಶೋಕ್ ನಾಯ್ಕ್, ಡಿಎಸ್ ಅರುಣ್, ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹಾಗೂ ಇತರರು ಈ ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.

ಸಂಸ್ಥೆಯ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತರಾಗಿ ಅಂತೆಯೇ ಶಿವಮೊಗ್ಗ ಜಿಲ್ಲೆಯ ಗಣರಾಜ್ಯೋತ್ಸವ ಸಮಾರಂಭದ ಸನ್ಮಾನ ಸ್ವೀಕರಿಸುತ್ತಿರುವುದು ಸಂತಸದ ವಿಚಾರ. ಸಂಸ್ಥೆಯ ವಿಜೇತ ಹಾಗೂ ಸನ್ಮಾನಿತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಶಿ.ಜು. ಪಾಶ ಉಪಾಧ್ಯಕ್ಷ ಎಸ್.ಕೆ. ಗಜೇಂದ್ರ ಸ್ವಾಮಿ, ಕಾರ್ಯದರ್ಶಿ ಎಮ್. ರವಿ ಸಂಸ್ಥೆಯ ಹಿರಿಯ ನಿರ್ದೇಶಕರಾದ ಜಿ. ಪದ್ಮನಾಬ್ ಹಾಗೂ ಸಮಿತಿ ಪದಾದಿಕಾರಿಗಳು ಆತ್ಮೀಯವಾಗಿ ಅಭಿನಂದಿಸಿದ್ದಾರೆ.