ಶಿವಮೊಗ್ಗ : ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳ ಪ್ರೀತಿಯ ಒಡೆಯ, ಯಜಮಾನ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ನಾಳೆ ಬಿಡುಗಡೆಗೊಳ್ಳುತ್ತಿದ್ದು, ಅಭಿಮಾನಿಗಳಿಂದ ಟಾಕೀಸ್ ಗಳಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಾಸ್ ಅಂಡ್ ಕ್ಲಾಸ್ ಹೀರೋ ಹಾಗೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಅಂದ್ರೆ ದರ್ಶನ್. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದ ಬಳಿ ಹಬ್ಬದ ರೀತಿಯಲ್ಲಿ ಟಾಕೀಸ್ ಅಂಗಳದಲ್ಲಿ ಜಾತ್ರೆ ರೀತಿಯಲ್ಲಿ ಸಂಭ್ರಮಿಸಲು ಕಟೌಟ್, ಫೆಕ್ಸ್, ಬಟಿಂಗ್ಸ್, ಕಟ್ಟುವ ಮೂಲಕ ಅಭಿಮಾನಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಶಿವಮೊಗ್ಗ ದ ಡಿ ಕಂಪನಿ, ಅಖಿಲ ಕರ್ನಾಟಕ ಚಾಲೇಂಜಿಂಗ್ ಸ್ಟಾರ್ ದರ್ಶನ್ ಸೇನಾ ಸಮಿತಿ ಶಿವಮೊಗ್ಗ ತಾಲೂಕು, ಕನ್ನಡ ಕಲಾ ಭೂಷಣ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಶಿವಮೊಗ್ಗ ಇವರ ವತಿಯಿಂದ ನಾಳೆ ಬೆಳಗ್ಗೆ ಕ್ರಾಂತಿ ಸಿನಿಮಾ ಬಿಡುಗಡೆ ಪ್ರಯುಕ್ತ ನಗರದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದಾರೆ.