ಶಿವಮೊಗ್ಗ,ಜ.16:
ನನ್ನ ಬದುಕಿನ 45 ವರ್ಷದ ಗುತ್ತಿಗೆದಾರರ ವೃತ್ತಿಯ ಅನುಭವದ ಬದುಕಲ್ಲಿ ನಾನು ಯಾವುದೇ ಸರ್ಕಾರ ಹಾಗೂ ಶಾಸಕರ ಮೂಲಕ ಯಾವುದೇ ಕೆಲಸವನ್ನು ಶಿಫಾರಸ್ಸಿನ ಮೂಲಕ ಪಡೆದಿಲ್ಲ. ಯಾವುದೇ ಗುತ್ತಿಗೆದಾರ ಕೆಲಸ ಮಾಡುವಾಗ ಅನುದಾನ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಗಮನಿಸಬೇಕು. ಇದು ನನ್ನ ಅನುಭವದ ಮಾತು ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ಮಂಜುನಾಥ್ ಹೇಳಿದರು.
ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪರ್ಸೆಂಟೇಜ್ ಪ್ರಶ್ನೆಗೆ ಉತ್ತರಿಸಿದವರು ಪರ್ಸಂಟೇಜ್ ಎಂಬುದು ಮೊದಲಿನಿಂದಲೂ ಇದೆ. ಈಗ ಸ್ವಲ್ಪ ಹೆಚ್ಚಾಗಿದೆ ಎಂದ ಅವರು ಇದೇ ವಿಚಾರವಾಗಿ ಸಂಘದ ವಿರುದ್ಧ ಬರುವ ಜ. 19ರಂದು ನಮ್ಮ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹಾಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.


ಗುತ್ತಿಗೆದಾರನ ಕರ್ತವ್ಯ ಎಂದರೆ ಒಂದು ರೀತಿ ಅಭಿಮನ್ಯುವಿನಂತೆ. ಏಕೆಂದರೆ, ಚಕ್ರವ್ಯೂಹದ ಒಳಗೆ ಹೋಗುವುದು ಅವರಿಗೆ ಗೊತ್ತಿತ್ತು. ಹಾಗೆ ನಮ್ಮ ಪರಿಸ್ಥಿತಿ ಆಗಿದೆ. ಕೆಲಸ ಮಾಡಿದ ಮೇಲೆ ಹಣ ಬರುವುದು ಕಷ್ಟವಾಗುತ್ತಿದೆ ಎಂದರು.
ಶಿವಮೊಗ್ಗ ವಿದ್ಯಾನಗರ ರಸ್ತೆ ಕಾಮಗಾರಿ 9 ಕೋಟಿ ರೂಪಾಯಿ ವೆಚ್ಚದಲ್ಲಿ ಏಳು ವರ್ಷದಿಂದ ಮಾಡುತ್ತಿದ್ದೇನೆ. ಸಮರ್ಪಕವಾದ ಅನುದಾನ ಬಿಡುಗಡೆಯಾಗಿಲ್ಲ. ಹಿಂದೆ ಶಾಸಕ ಕೆಬಿ ಪ್ರಸನ್ನ ಕುಮಾರ್ ಅವರು ಎರಡೂವರೆ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ನಂತರ ಸಮರ್ಪಕವಾಗಿ ಹಣ ಬಂದಿಲ್ಲ ಒಂದು ಕೆಲಸವನ್ನು ಏಳು ವರ್ಷದಿಂದ ಮಾಡಿದರೆ ಹೇಗೆ ನಮ್ಮ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.
ಲೋಕೋಪಯೋಗಿ ಇಲಾಖೆ ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳು ಸರ್ಕಾರದ ಅಥವಾ ಶಾಸಕರ ಮಾತು ಕೇಳುತ್ತಿಲ್ಲ. ಇನ್ನೂ ಗುತ್ತಿಗೆದಾರರ ಮಾತು ಕೇಳುತ್ತಾರಾ ಎಂದ ಅವರು ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಲು ಶರೀಫ್ ಒಬ್ಬರನ್ನು ಬಿಟ್ಟರೆ ಮತ್ತೆ ಯಾರಿಗೂ ಅರ್ಹತೆ ಇಲ್ಲ. ಅಷ್ಟೊಂದು ಕಂಡೀಶನ್ ಗಳಿವೆ. ಕೇಳಿದರೆ ನಮ್ಮ ನಿಯಮ ಅದು ಎನ್ನುತ್ತಾರೆ. ಸ್ಥಳೀಯ ಗುತ್ತಿಗೆದಾರರಿಗೆ ಹೇಗೆ ಕೆಲಸ ಸಿಗುತ್ತದೆ ಎಂದು ಪ್ರಶ್ನಿಸಿದರು.


ಬರುವ ಜನವರಿ 18ರಂದು ಈ ವಿಷಯದ ಕುರಿತು ರಾಜ್ಯದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಅದರಲ್ಲಿ ಎಲ್ಲಾ ಗುತ್ತಿಗೆದಾರರು ಆಗಮಿಸುವಂತೆ ಅವರು ವಿನಂತಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!