: ದೇವಸ್ಥಾನಗಳಲ್ಲಿನ ಹುಂಡಿ ಕಳ್ಳತನಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಮಾಲುಸಹಿತ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಮಳ್ಳ, ಸಿರವಂತೆ, ತೆರವಿನಕೊಪ್ಪ, ಬಿಳಿಸಿರಿ-ಕೊರ್ಲಿಕೊಪ್ಪ ದೇವಸ್ಥಾನಗಳಲ್ಲಿ ಕಳ್ಳತನ ನಡೆದಿತ್ತು. ಈ ವರ್ಷ ತಾಲ್ಲೂಕಿನಲ್ಲಿ ಒಟ್ಟು ೭ ದೇವಸ್ಥಾನಗಳಲ್ಲಿ ಕಳ್ಳತನ ನಡೆದಿತ್ತು. ದೇವಸ್ಥಾನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಹುಂಡಿ ಕಳ್ಳತನ ಬೇಧಿಸಲು ಜಿಲ್ಲಾ ರಕ್ಷಣಾಧಿಕಾರಿ ಮಿಥನ್ ಕುಮಾರ್ ವಿಶೇಷ ತಂಡ ರಚನೆ ಮಾಡಿದ್ದರು.
ಸಾಗರದ ಸಹಾಯಕ ಪೊಲೀಸ್ ಉಪ ಅಧೀಕ್ಷಕ ರೋಹನ್ ಜಗದೀಶ್ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್, ಸುಜಾತ, ಸಿಬ್ಬಂದಿಗಳಾದ ಸನಾವುಲ್ಲಾ, ರವಿಕುಮಾರ್, ಹನುಮಂತ ಜಂಬೂರು, ಶ್ರೀನಿವಾಸ್ ಒಳಗೊಂಡ ತಂಡವು ಶಿವಮೊಗ್ಗದ ಮುಸ್ತಫಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನಿಂದ ೨೫ಸಾವಿರ ರೂಪಾಯಿ ಮೌಲ್ಯದ ತಾಮ್ರದ ದೀಪಗಳು, ಗಂಟೆಗಳನ್ನು, ಕೃತ್ಯಕ್ಕೆ ಬಳಸಿದ ೩೫ಸಾವಿರ ರೂ. ಮೌಲ್ಯದ ಒಂದು ಹಿರೋಹೊಂಡ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ ಎರಡನೇ ಆರೋಪಿ ದರ್ಶನ್ ಎಂಬಾತ ತಲೆ ಮರೆಸಿಕೊಂಡಿದ್ದು ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ದರ್ಶನ್ ಪತ್ತೆಯಾದರೆ ಇನ್ನಷ್ಟು ದೇವಸ್ಥಾನಗಳ ಕಳವು ಪ್ರಕರಣ ಬಯಲಿಗೆ ಬರುವ ಸಾಧ್ಯತೆ ಇದೆ. ಆರೋಪಿ ಮತ್ತು ಮಾಲುಪತ್ತೆ ಕಾರ್ಯದಲ್ಲಿ ಶ್ರಮಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾg