ಶಿವಮೊಗ್ಗ,ಜ.2:
ಇಂದು ಸಂಜೆ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯ ಜೈಲಿನ ಕಾಂಪೌಂಡ್ ಗೋಡೆಯೊಂದಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.

ಶಿವಮೊಗ್ಗ ಲಕ್ಷ್ಮಿ ಚಿತ್ರಮಂದಿರ ಹಿಂಭಾಗದ ಮನೆಯೊಂದರ ನಿವಾಸಿ ಉಮೇಶ ಎಂಬಾತ ಸಾವು ಕಂಡ ವ್ಯಕ್ತಿ ಎನ್ನಲಾಗಿದೆ.
ಆತ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಬಿಟ್ಟು ಅಗಲಿದ್ದಾನೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಮನೆಯ ಸಮಸ್ಯೆ ಹಿನ್ನೆಲೆಯಲ್ಲಿ ಕುಡಿತದ ಅಭ್ಯಾಸದಿಂದ ಇಂತಹ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಮಾದಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
