: ಇಲ್ಲಿನ ಸಾಗರ ವ್ಯಾಯಾಮ ಶಾಲೆ ವತಿಯಿಂದ ದಿ. ಉದಯಕುಮಾರ್ ನಾಯ್ಡು ಸ್ಮರಣಾರ್ಥ ಜ. ೮ರಂದು ಸಂಜೆ ೫ಕ್ಕೆ ಗಾಂಧಿ ಮೈದಾನದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮತ್ತು ಮನರಂಜನಾ ಕಾರ್ಯಕ್ರಮ, ಆಹಾರ ಮೇಳ ಏರ್ಪಡಿಸಲಾಗಿದೆ.

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಜ್ಯ ಮತ್ತು ಹೊರರಾಜ್ಯದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ದೇಹದಾರ್ಢ್ಯಪಟುಗಳು ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ ಸುಮಾರು ೨ ಲಕ್ಷ ರೂ. ಮೊತ್ತದ ಬಹುಮಾನ ನೀಡಲಾಗುತ್ತದೆ. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಮೊ. ೯೨೪೩೩೧೪೨೭೯ ಸಂಪರ್ಕಿಸಬಹುದು.

ನಂತರ ಜ್ಯೂನಿಯರ್ ರವಿಚಂದ್ರನ್, ಜ್ಯೂನಿಯರ್ ಶಂಕರ್ನಾಗ್, ಜ್ಯೂನಿಯರ್ ಪುನಿತ್ರಾಜ್ ಅವರಿಂದ ಮನರಂಜನಾ ಕಾರ್ಯಕ್ರಮ ಮತ್ತು ಹೆಸರಾಂತ ಗಾಯಕ ರಾಧಾಕೃಷ್ಣ ಬೆಂಗಳೂರು ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ರಾಘವೇಂದ್ರ ನಾಯ್ಡು ಪ್ರಕಟಣೆಯಲ್ಲಿ ಕೋರಿ