ಬೆಂಗಳೂರಿನ ಅರವಿಂದ್ ಇಂಡಿಯಾದ ವತಿಯಿಂದ ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಡಿ. ೨೨ ರಿಂದ ೨೬ ರವರೆಗೆ ಅರವಿಂದ್ ಪುಸ್ತಕ ಹಬ್ಬದ ಶೀರ್ಷಿಕೆಯಡಿ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ ಎಂದು ಸಂಯೋಜಕ ಚೇತನ್ ಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುಸ್ತಕ ಓದುವ ಹವ್ಯಾಸ ಇಂದು ಕಡಿಮೆಯಾಗಿದೆ. ಯುವಕರು ಮೊಬೈಲ್ ನತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ, ಅದರ ಜೊತೆಗೆ ಓದುವ ಹವ್ಯಾಸ ಉಳಿಸಿ ಬೆಳೆಸಬೇಕು. ಮತ್ತು ಹೊಸ ಕವಿಗಳು, ಸಾಹಿತಿಗಳು, ಲೇಖಕರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ಪುಸ್ತಕ ಮೇಳ ಆಯೋಜಿಸಲಾಗಿದೆ ಎಂದರು.


ವಿವಿಧ ಸಾಹಿತಿಗಳ ಪುಸ್ತಕಗಳು, ಕಾದಂಬರಿಗಳು, ಕವನ ಸಂಕಲನ, ನಾಟಕ, ಕಲೆ ಮತ್ತು ಸಾಹಿತ್ಯ, ಶಾಲಾ ಮಕ್ಕಳ ಅಧ್ಯಯನಕ್ಕೆ ಉಪಯುಕ್ತವಾದ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಅಧ್ಯಯನ ಸಾಮಗ್ರಿಗಳು, ಸರ್ಕಾರದ ಎ???ಪಿಗೆ ಸಂಬಂಧಿಸಿದಂತೆ ಪುಸ್ತಕಗಳು ಹೀಗೆ ಒಂದೇ ಸೂರಿನಡಿ ಎಲ್ಲಾ ರೀತಿಯ ಪುಸ್ತಕಗಳು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟವಾಗುತ್ತವೆ ಎಂದರು.
ಇಂದು ಜಿಲ್ಲಾಧಿಕಾರಿಗಳು ಮೇಳ ಉದ್ಘಾಟಿಸಿದ್ದಾರೆ. ನಾಳೆ ಬೆಳಗ್ಗೆ ೧೦ ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಅರವಿಂದ್ ಐಎಎಸ್ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡುವರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾನಂದ ಸರಸ್ವತಿ ಹಾಗೂ ಗಾಯಕ ಯುವರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಡಿ. ೨೬ ರಂದು ಬೆಳಗ್ಗೆ ಅರವಿಂದ್ ಇಂಡಿಯಾದ ಅವಲೋಕನ ಮಾಸಪತ್ರಿಕೆಯ ಮೂರನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಲಿದೆ. ಕುವೆಂಪು ವಿವಿ ಕುಲಸಚಿವೆ ಅನುರಾಧ ಜಿ., ಕನ್ನಡ ಉಪನ್ಯಾಸಕ ಡಾ. ಕಲೀಂ ವುಲ್ಲಾ, ಅರವಿಂದ್ ಇಂಡಿಯಾದ ನಿರ್ದೇಶಕ ಎ.ಕೆ. ಪ್ರವೀಣ್ ಉಪಸ್ಥಿತರಿರುತ್ತಾರೆ ಎಂದರು.


ಸಮಾರೋಪ ಸಮಾರಂಭ ಡಿ. ೨೬ ರಂದು ಸಂಜೆ ೬ ಗಂಟೆಗೆ ನಡೆಯಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸಲಿದ್ದಾರೆ. ಮೇಳದಲ್ಲಿ ಪುಸ್ತಕಗಳಿಗೆ ವಿವಿಧ ರೀತಿಯಲ್ಲಿ ರಿಯಾಯಿತಿ ಕೂಡ ನೀಡಲಾಗುವುದು ಎಂದ ಅವರು, ಹೆಚ್ಚಿನ ವಿವರಗಳಿಗೆ ೮೯೦೪೨ ೨೨೦೦೨ ಸಂಪರ್ಕಿಸುವಂತೆ ಕೋರಿದರು.

By admin

ನಿಮ್ಮದೊಂದು ಉತ್ತರ

error: Content is protected !!