


ಶಿವಮೊಗ್ಗ, ಡಿ.19:
ಇತ್ತೀಚಿನ ದಿನಗಳಲ್ಲಿ ಆರೋಪಿಗಳ ಅಕ್ರಮ ಅಡ್ಡಗಳ ವ್ಯವಹಾರ ಜೋರಾಗುವುದರ ಜೊತೆಗೆ ಪೊಲೀಸರ ಮೇಲು ಹಲ್ಲೆ ಮಾಡುವಂತಹ ಪರಿಸ್ಥಿತಿಗೆ ತಲುಪಿರುವುದು ದುರಂತವೇ ಹೌದು ಕಳೆದ ಎರಡು ತಿಂಗಳ ಹಿಂದಷ್ಟೇ ಓರ್ವ ಆರೋಪಿಯನ್ನು ಹಿಡಿಯಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಪ್ರಕರಣದ ಆರೋಪಿಯ ಕಾಲಿಗೆ ಗುಂಡೆ ದಿನ ತಿರುಗೇಟು ನೀಡಲಾಗಿತ್ತು ಅಂತಹದೇ ಮತ್ತೊಂದು ಘಟನೆ ಇಂದು ಶಿವಮೊಗ್ಗ ಹೊರಗಡೆ ಗ್ರಾಮೀಣ ಭಾಗ ಒಂದರಲ್ಲಿ ನಡೆದಿದೆ.


ವಿವರ
ತನ್ನ ವಿರುದ್ದದ ಪ್ರಕರಣ ವಾಪಾಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿ ನೊಂದವರಿಗೆ ಬೆದರಿಕೆ ಹಾಕಿ ಹಾಗೂ ಅವರ ಕಾರಿಗೆ ಬೆಂಕಿ ಹಚ್ಚಿ ಬೆದರಿಸಿದ್ದ ಆರೋಪಿಯ ಕಾಲಿಗೆ ಪೋಲೀಸರು ಗುಂಡೇಟು ಹೊಡೆದಿದ್ದಾರೆ.
ಆರೋಪಿ ಪ್ರವೀಣ ಯಾನೆ ಮೋಟು ಎಂಬಾತನನ್ನ ಕುಂಸಿ ಬಳಿಯ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ಬಂಧಿಸಲು ಹೋದ ಗ್ರಾಮಾಂತರ ಪೊಲೀಸರ ಮೇಲೆ ಆರೋಪಿ ಪ್ರವೀಣ್ ದಾಳಿ ನಡೆಸಿದ್ದಾನೆ.
ಗ್ರಾಮಾಂತರ ಪೊಲೀಸ್ ಠಾಣೆಯ ಪಿಸಿ ಶಿವರಾಜ್ ಪ್ರವೀಣನನ್ನ ಹಿಡಿಯಲು ಹೋದಾಗ ದಾಳಿ ನಡೆಸಿದ್ದಾನೆ.

ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಮುಂದಾದಾಗ ಪಿಎಸ್ಐ ರಮೇಶ್ ದಾಳಿ ನಡೆಸದಂತೆ ಎಚ್ಚರಿಸಿದ್ದಾರೆ. ಎಚ್ಚರಿಕೆಯನ್ನ ದಿಕ್ಕರಿಸಿ ಆರೋಪಿ ದಾಳಿ ಮಾಡಲು ಮುಂದಾದಾಗ ಆರೋಪಿಯ ಕಾಲಿಗೆ ಗುಂಡು ಹೊಡೆಯಲಾಗಿದೆ. ಡಿ. 17 ರಂದು ಜೈಲ್ ರಸ್ತೆಯ ವನಜಾಕ್ಷಿ ಎಂಬುವರಿಗೆ ಹಾಕಿದ್ದ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮುಂದೆ ನಿಲ್ಲಿಸಿದ್ದ ಐ 20 ಕಾರಿಗೆ ಈತ ಬೆಂಕಿ ಹಚ್ಚಿದ್ದನು. ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಮೂರು ತಿಂಗಳ ಹಿಂದೆ ಶಿವಮೊಗ್ಗದ ಜೈಲ್ ರಸ್ತೆಯಲ್ಲಿ ವನಜಾಕ್ಷಮ್ಮ ಎಂಬುವರ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿದ್ದನು. ಅಲ್ಲಿಂದಲೇ ಪ್ರವೀಣ ಕೇಸ್ ವಾಪಾಸ್ ಪಡೆಯುವಂತೆ ಬೆದರಿಕೆ ಹಾಕಿದ್ದನು.

ಮೂರು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ ಪ್ರವೀಣ ಇಂದು ಪೊಲೀಸರ ಮೇಲೆಯೇ ದಾಳಿಗೆ ಮುಂದಾಗಿದ್ದಾನೆ.
ದಾಳಿಯಲ್ಲಿ ಗಾಯಗೊಂಡಿದ್ದ ಪೊಲೀಸ್ ಶಿವರಾಜು. ಹಾಗೂ ಆರೋಪಿಯನ್ನು ಮೆಗ್ಗಾನ್ ಗೆ ದಾಖಲಿಸಲಾಗಿದೆ.