ಮಳೆಯ ಸಿಂಚನದ ನಡುವೆ ಕುಟುಂಬದೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪತ್ರಕರ್ತರು ಸಂಭ್ರಮದಿಂದ ಕಳೆದರು.
ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪತ್ರಕರ್ತರ ಕುಟುಂಬದ ಸಡಗರ ಮತ್ತು ಸಂಭ್ರಮದಿಂದ ಭಾಗವಹಿಸಿದ್ದರು. ಮಕ್ಕಳು, ಮಹಿಳೆಯರು, ಪತ್ರಕರ್ತರು, ವಿವಿಧ ಆಟಗಳಲ್ಲಿ ಪಾಲ್ಗೊಂಡು ಗೆದ್ದು, ಸೋತು, ಹುಸಿ ಜಗಳ ತೆಗೆದು, ಬಿದ್ದು, ಎದ್ದು ಗುಂಡು ಎಸೆದು ಹಗ್ಗ ಜಗ್ಗಾಡಿ, ಕಣ್ಣಿಗೆ ಬಟ್ಟೆ ಕಟ್ಟಿ ದಿಕ್ಕು ತಪ್ಪಿ ಖುರ್ಚಿಗಾಗಿ ಸುತ್ತುವರಿದು ಚೀಟಿ ಎತ್ತಿ ಭಾಷಣ ಮಾಡಿ, ಊಟ ಮಾಡಿ ಮಳೆಯಲ್ಲಿ ನೆನೆದು ಸಂಭ್ರಮಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ಬರಬೇಕು ಎನ್ನುವ ಉದ್ದೇಶದಿಂದ ಆಯೋಜಕರು ಸರಳ ರೀತಿಯಲ್ಲಿ ಆಟಗಳನ್ನು ಏರ್ಪಡಿಸಿದ್ದರು. ಮೊದಲ ಬಹುಮಾನ ಪಡೆದವರು ಉಳಿದ ಆಟಗಳಲ್ಲಿ ಉಳಿದ ಆಟಗಳಲ್ಲಿ ಭಾಗವಹಿಸುವಂತಿರಲಿಲ್ಲ. ಗುಂಪು ವಿಭಾಗದಲ್ಲಿ ಹೆಚ್ಚು ಜನರಿಗೆ ಬಹುಮಾನ ಸಿಗುವಂತೆ ನೋಡಿಕೊಳ್ಳಲಾಯಿತು. ವಿಶೇಷವಾಗಿ ಮಕ್ಕಳು ಭಾಗವಹಿಸಿ ಕುಣಿದಾಡಿದರು. ಸದಾ ಒತ್ತಡದಲ್ಲಿ ಮುಳುಗಿದ್ದ ಪತ್ರಕರ್ತರು ಈ ಕ್ರೀಡಾಕೂಟದಲ್ಲಿ ತಮ್ಮ ಕುಟುಂಬದೊಂದಿಗೆ ಬೆರೆತು ರಿಲ್ಯಾಕ್ಸ್ ಮೂಡಿನಲ್ಲಿದ್ದುದು ಕಂಡು ಬಂದಿತು.
ಬೆಳಿಗ್ಗೆ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಕೆ.ಎಸ್. ಈಶ್ವರಪ್ಪ, ವರದಿ ಮಾಡುವುದ? ಪತ್ರಕರ್ತರ ಕೆಲಸವಲ್ಲ. ಸ್ನೇಹ, ಶಾಂತಿಯನ್ನು ಹಂಚುವುದು ಕೂಡ ಅವರ ಕೆಲಸದ ಒಂದು ಭಾಗವಾಗಿದೆ. ಪತ್ರಕರ್ತರ ನಡುವೆ ಸ್ಪರ್ಧೆ ಇದ್ದರೂ ಪರಸ್ಪರ ಪ್ರೀತಿ, ಪ್ರೇಮ, ವಿಶ್ವಾಸ ಬೆಳೆಸಬೇಕಿದೆ ಎಂದರು.
ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್ ಮಾತನಾಡಿ, ಪತ್ರಕರ್ತರು ತಮ್ಮ ದೈನಂದಿನ ಒತ್ತಡ ಮರೆತು ಸ್ನೇಹಮಯಿಯಾಗಿ ಇರುವುದು ಅಗತ್ಯವಾಗಿದೆ. ಅದಕ್ಕೆ ಕ್ರೀಡಾಕೂಟಗಳು ಸಹಕಾರಿ ಆಗಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ, ಮೂರು ವ?ಗಳಿಂದ ಪತ್ರಕರ್ತರ ಕ್ರೀಡಾಕೂಟ ಆಯೋಜನೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವ? ಆಯೋಜಿಸಿದ ಎರಡು ದಿನಗಳ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಇದೊಂದು ಸೌಹಾರ್ದಯುತವಾದ ಕ್ರೀಡಾಕೂಟ. ಕ್ರೀಡೆ ಎಂದರೆ ಹಾಗೆ. ಅದು ಸದಾ ಕ್ರಿಯಾಶೀಲತೆಯನ್ನು ನೀಡುತ್ತದೆ. ಸಾಮರಸ್ಯವನ್ನು ಬೆಳೆಸುತ್ತದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ಕ್ರೀಡೆಗೂ ಅವರು ಆದ್ಯತೆ ಕೊಡುತ್ತಿರುವುದು ಸಂತೋಷದ ವಿಷಯ. ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚುತ್ತಿರುವುದು ಸ್ವಾಗತಾರ್ಹ ಎಂದರು.
ಈ ಕ್ರೀಡಾಕೂಟವನ್ನು ದೈಹಿಕ ಶಿಕ್ಷಕರುಗಳಾದ ರಾ.ಹ. ತಿಮ್ಮೇನಹಳ್ಳಿ, ರಾಕೇಶ್, ಸುರೇಶ್ ನಾಯ್ಕ್, ಮಹ್ಮದ್ ಯೂಸೂಫ್ ನಡೆಸಿಕೊಟ್ಟರು. ಕ್ರೀಡಾಕೂಟದ ಯಶಸ್ಸಿಗಾಗಿ ಅನೇಕ ಪತ್ರಕರ್ತರು ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್.ರವಿಕುಮಾರ್, ವಿಶೇ? ಆಹ್ವಾನಿತ ಜಿ. ಪದ್ಮನಾಭ, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ನಂಜುಂಡಪ್ಪ, ಉಪಾಧ್ಯಕ್ಷ ಹುಚ್ರಾಯಪ್ಪ, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಗ್ರಾಮಾಂತರ ಕಾರ್ಯದರ್ಶಿ ದೀಪಕ್ ಸಾಗರ್, ಉಪಾಧ್ಯಕ್ಷರಾದ ಆರ್.ಎಸ್. ಹಾಲಸ್ವಾಮಿ, ವೈದ್ಯ, ಕಾರ್ಯದರ್ಶಿ ಕೆ.ಆರ್. ಸೋಮನಾಥ್, ರಂಜಿತ್, ರೋಹಿತ್, ನಾಗರಾಜ ಶೆಣೈ, ಭರತ್‌ರಾಜ್ ಸಿಂಗ್ ಸೇರಿದಂತೆ ಮತ್ತಿತರರು ಇದ್ದರು.