Thinking emoticon - question face emoji with eyeglasses

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಸುದ್ದಿ, ನ.30:
ವಿದ್ಯಾರ್ಥಿಗಳ ಶಾಲಾ ಬ್ಯಾಗ್ ನಲ್ಲಿ ಕಾಂಡೋಮ್ ಪತ್ತೆ ಆಗಿದೆ. ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆಯೊಂದು ಪೋಷಕರನ್ನು ಹಾಗೂ ಶಿಕ್ಷಕರನ್ನು ಆಂತಕಕ್ಕೀಡು ಮಾಡಿದೆ. ವಿದ್ಯಾರ್ಥಿಗಳು ಶಾಲೆಗಳಿಗೆ ಮೊಬೈಲ್ ತರಬಾರದು ಎನ್ನುವ ನಿಯಮವಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ನಡೆಸಿದಾಗ ಶಿಕ್ಷಕಿಯರು ಶಾಕ್ ಆಗಿರುವ ಘಟನೆ ಇದಾಗಿದೆ.

ಬೆಂಗಳೂರು ನಗರದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ನಲ್ಲಿ ಮೊಬೈಲ್ ಫೋನ್ಗಳಲ್ಲದೇ, ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು, ಸಿಗರೇಟ್ಗಳು, ಲೈಟರ್ಗಳು ಹಾಗೂ ವೈಟ್ನರ್ಗಳು, ಅಧಿಕ ಹಣ ಪತ್ತೆಯಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ದಿನ ಪತ್ರಿಕೆಯಲ್ಲಿ ವರದಿಯಾಗಿದೆ. ಇದರಿಂದ ಪರಿಶೀಲನೆ ನಡೆಸಿದ ಅಧಿಕಾರಿಗಳು ಹಾಗೂ ಅಧ್ಯಾಪಕರು ಆಘಾತಕ್ಕೊಳಗಾಗಿದ್ದಾರೆ.


ಕೊರೊನಾ ಸಮಯದಲ್ಲಿ ಆನ್ಲೈನ್ ಶಿಕ್ಷಣದ ಬಳಿಕ ವಿದ್ಯಾರ್ಥಿಗಳಿಗೆ ಮೊಬೈಲ್ ಗೀಳು ಹೆಚ್ಚಾಗಿದ್ದು, ತರಗತಿಗಳಿಗೆ ಮೊಬೈಲ್ ತಂದು ಬಳಸುವ ಬಗ್ಗೆ ದೂರುಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಕೆಎಎಂಎಸ್ ಸಹಯೋಗದೊಂದಿಗೆ ಅಧ್ಯಾಪಕರ ಬೆಂಗಳೂರಿನ ಅನೇಕ ಶಾಲೆಯ ಮಕ್ಕಳ ಬ್ಯಾಗ್ಗಳನ್ನು ಪರಿಶೀಲನೆ ನಡೆಸಿದ್ದಾರೆ.


ಈ ವೇಳೆ ಅಪ್ರಾಪ್ತ ಮಕ್ಕಳ ಬ್ಯಾಗ್ನಲ್ಲಿ ಕೆಲವು ಊಹಿಸಲಾರದ ವಸ್ತುಗಳು ಕಂಡುಬಂದಿದೆ. ಈ ಬಗ್ಗೆ ಶಾಲೆಯೊಂದರ ಮುಖ್ಯೋಪಾಧ್ಯಾಯರು ಮಾತನಾಡಿದ್ದು, ಈ ಬಗ್ಗೆ ಶಾಲೆಯಲ್ಲಿ ವಿಶೇಷವಾಗಿ ಪೋಷಕರ ಸಭೆ ನಡೆಸುತ್ತೇವೆ. ಮಕ್ಕಳ ಬ್ಯಾಗ್ನಲ್ಲಿ ಈ ರೀತಿಯ ವಸ್ತುಗಳು ಪತ್ತೆಯಾಗಿರುವುದರಿಂದ ಪೋಷಕರು ಕೂಡ ಆತಂಕಕ್ಕೊಳಗಾಗಿದ್ದಾರೆ.
ಮಕ್ಕಳಲ್ಲಿ ಆಗಿರುವ ಅನಿರೀಕ್ಷಿತ ಬದಲಾವಣೆಗಳ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.