ತುಂಗಾತರಂಗ ವಿಶೇಷಾಂಕ
ಶಿವಮೊಗ್ಗ: ಅಂಬೇಡ್ಕರ್ ಹಾಕಿದ ಭದ್ರ ಬುನಾದಿಯ ಸಂವಿಧಾನಕ್ಕೆ ಯುವ ಜನತೆ ಗೋಡೆಗಳಾಗಬೇಕು ಎಂದು ಮಹಾನಗರ ಪಾಲಿಕೆ ಎ.ಪಿ.ಆರ್.ಒ. ನಿರ್ದೇಶಕಿ ಸುಪ್ರಿಯಾ ಹೇಳಿದರು.

ಅವರು ಇಂದು ಸಹ್ಯಾದ್ರಿ ಕಾಲೇಜಿನಲ್ಲಿ ಎನ್ಎಸ್ಎಸ್, ರೆಡ್ ಕ್ರಾಸ್, ಮಹಾನಗರ ಪಾಲಿಕೆ, ರಾಜ್ಯ ಶಾಸ್ತ್ರ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಮತ್ತು ಯುವ ಮತದಾರರ ನೋಂದಣಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾನ ಪವಿತ್ರವಾದುದು. ಇದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನವೇ ಶ್ರೇಷ್ಠ. ಡಾ. ಅಂಬೇಡ್ಕರ್ ಭಾರತೀಯ ಸಂವಿಧಾನಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಯುವ ಜನತೆ ಈ ಸಂವಿಧಾನಕ್ಕೆ ಗೌರವ ನೀಡಿ ಅದನ್ನು ಕಾಪಾಡುವತ್ತ ಗಮನಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೆ.ಬಿ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಎನ್. ಮಂಜುನಾಥ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಬಳ್ಳೆಕೆರೆ ಸಂತೋಷ್, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಹಾಲಮ್ಮ, ರೆಡ್ ಕ್ರಾಸ್ ಸಂಚಾಲಕ ಮಂಜುನಾಥ್, ಡಾ. ಎಂ.ಹೆಚ್. ಪ್ರಹ್ಲಾದಪ್ಪ, ಡಾ. ಪ್ರಸನ್ನಕುಮಾರ್, ಡಾ. ಮುದುಕಪ್ಪ ಉಪಸ್ಥಿತರಿದ್ದರು.