ವಿಶ್ವಕ್ಕೆ ಭಾರತದ ಅತ್ಯುತ್ತಮ ಕೊಡುಗೆ ಯೋಗ…. ಉತ್ತಮ ಭವಿ?ಕ್ಕಾಗಿ ಯುವ ಜನತೆ ನಿತ್ಯ ಯೋಗದಲ್ಲಿ ತೊಡಗಬೇಕು ಎಂದು ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.


ಅವರು ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಯೋಗವು ದೇಹ ಮನಸ್ಸನ್ನು ಒಂದು ಮಾಡುತ್ತದೆ. ಉತ್ತಮ ಭವಿ?ವನ್ನು ರೂಪಿಸಿಕೊಳ್ಳುವುದಕ್ಕೆ ಸಮಸ್ತ ಪುರು? ಮಹಿಳೆಯರು ಯೋಗದಲ್ಲಿ ತೊಡಗಬೇಕೆಂದರು. ತಾವು ಶಾಲಾ ವಿದ್ಯಾರ್ಥಿ ದಿನಗಳಿಂದ ಆರಂಭಿಸಿ ನಿತ್ಯ ಯೋಗ ಅಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದರು. ಪೊಲೀಸ್ ಇಲಾಖೆಯ ಕಾರ್ಯನಿರ್ವಹಿಸುವವರಿಗೆ ಒತ್ತಡ ಇರುತ್ತದೆ. ಯೋಗದಿಂದ ಅದಕ್ಕೆ ಪರಿಹಾರವಿದೆ ಎಂದರು.


ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಶಿಕ್ಷಣ ನೀಡುತ್ತಿರುವುದಕ್ಕೆ ಸಂತೋ? ವ್ಯಕ್ತಪಡಿಸಿದರು. ಸಮಾಜದಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದರು. ದೂರು ಅಥವಾ ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿಡುವುದಾಗಿ ತಿಳಿಸಿ ಯಾವುದೇ ಸಂದರ್ಭದಲ್ಲಿ ಪೋಲಿಸ್ ಸಹಾಯ ಬೇಕಾದಲ್ಲಿ ನೇರವಾಗಿ ತಮಗೆ ಸಂಪರ್ಕಿಸಬಹುದೆಂದರು.


ಶಿವಗಂಗಾ ಯೋಗ ಕೇಂದ್ರದ ೩೦ ಶಾಖೆಗಳ ಶಿಕ್ಷಣಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯೋಗಾಚಾರ್ಯ ಡಾ ಸಿ.ವಿ. ರುದ್ರಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಯೋಗ ಕೇಂದ್ರದ ಕಾರ್ಯದರ್ಶಿ ಸೂಡ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್,ಹಾಲಪ್ಪ, ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು. ವಿಜಯ ಬಾಯರ್ ಪ್ರಾರ್ಥಿಸಿ, ಸುಧಾಕರ್ ರವರಿಂದ ಸ್ವಾಗತ,ಮಹಾಬಲೇಶ್ವರಹೆಗಡೆ,ರಾಜಶೇಖರ್,ವೀಣಾಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. (ಫೋಟೊ ಇದೆ)

By admin

ನಿಮ್ಮದೊಂದು ಉತ್ತರ

You missed

error: Content is protected !!