ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಮಖಂಡರೋ ಅಥವಾ ಕಾಂಗ್ರೆಸ್ ವಕ್ತಾರರೋ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವೈ.ಬಿ.ಚಂದ್ರಕಾಂತ್ ಪ್ರಶ್ನಿಸಿದ್ದಾರೆ.
ಚುನಾವಣೆ ಇನ್ನೂ ಹಲವು ತಿಂಗಳುಗಳು ಇರುವಾಗಲೇ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸುವ ಮೂಲಕ ಕೆ.ಎಸ್.ಈಶ್ವರಪ್ಪನವರು ಬಿ.ಜೆ.ಪಿ ಮುಖಂಡರೋ ಅಥವಾ ಕಾಂಗ್ರೆಸ್ ಪಕ್ಷದ ವಕ್ತಾರರೋ ಎನ್ನುವ ಗೊಂದಲವನ್ನು ಬಿ.ಜೆ.ಪಿ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮೂಡಿಸಿದ್ದಾರೆ. ಬಿಜೆಪಿ ನಾಯಕರು ಕೂಡ ಮುಂದಿನ ಚುನಾವಣೆಯಲ್ಲಿ ಇಂತಹವರಿಗೆ ಸೀಟು ಎಂದು ಹೇಳುತ್ತಾರೆ. ಹೀಗಿರುವಾಗ ಸಿದ್ದರಾಮಯ್ಯ ಹೇಳಿರುವುದರಲ್ಲಿ ತಪ್ಪೇನಿದೆ. ಅಷ್ಟಕ್ಕೂ ಅದು
ಕಾಂಗ್ರೆಸ್ಸಿನ ಒಳಮನೆಯ ವಿಷಯ. ಅವರು ಬಿಜೆಪಿಯ ಗರ್ಭಗುಡಿಗೇನೂ ಬಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವ ಅಧಿಕಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಇದೆ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಲು ಹಾಗೆ ಹೇಳಿದ್ದನ್ನೇ ಅಪರಾಧ ಎನ್ನುವಂತೆ ಮಾತನಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದವರಿಗೆ ಚುನಾವಣೆಗೆ ಟಿಕೇಟ್ ಕೊಟ್ಟರೆ ಕೆ.ಎಸ್. ಈಶ್ವರಪ್ಪರಿಗೇಕೆ ಹೊಟ್ಟೆ ನೋವು. ಕಾಂಗ್ರೆಸ್ ಪಕ್ಷದ ಆಗು-ಹೋಗುಗಳ ಬಗ್ಗೆ ಚಿಂತಿಸುವ ಅಥವಾ ಪ್ರಶ್ನಿಸುವ ಅಧಿಕಾರ ಕೆ.ಎಸ್. ಈಶ್ವರಪ್ಪರಿಗೆ ಇಲ್ಲ. ಅವರು ತಮ್ಮ ಪಕ್ಷದ ಗ್ಗೆ ಮಾತ್ರಯೋಚಿಸಲಿ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ.
ಕೆ.ಎಸ್‌ಈಶ್ವರಪ್ಪ ಬಾಯಿ ಬಿಟ್ಟರೆ ಸಾಕು ಕಾಂಗ್ರೆಸ್, ಸೋನಿಯಾಗಾಂಧಿ, ಸಿದ್ದರಾಮಯ್ಯ ಅವರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಬಹುಷಃ ರಾತ್ರಿನಿದ್ದೆಯಲ್ಲಿಯೂ ಕೆ.ಎಸ್.ಈಶ್ವರಪ್ಪ ಅವರು ಈ ಬಗ್ಗೆ ಕನವರಿಸುತ್ತಿರಬಹುದು.
ಕೆ.ಎಸ್.ಈಶ್ವರಪ್ಪ ಅವರ ಕನವರಿಕೆ ಅವರ ೭೩ನೇ ವಯಸ್ಸಿನವರೆಗೂ ಅಷ್ಟೇನೂ ಇರಲಿಲ್ಲ. ಯಾವಾಗ ನರೇಂದ್ರ ಮೋದಿಯವರು ತಮ್ಮ ಪಕ್ಷದಲ್ಲಿ ಸಕಿಯ ರಾಜಕಾರಣದಲ್ಲಿ ಇರಬೇಕಾದರೆ ೭೫ ವರ್ಷ ಮಿತಿಗೊಳಿಸಿದರೋ ಅಂದಿನಿಂದ ಹೆಚ್ಚಾಗಿದೆ. ಕೆ.ಎಸ್.ಈಶ್ವರಪ್ಪನವರು ಇಂತಹ ಕನವರಿಕೆ ಬಿಟ್ಟು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಟಿಕೆಟ್ ಪಡೆಯುವ ಕಡೆಗೆ ಹೋರಾಟ ಮಾಡಲಿ ಎಂದಿದ್ದಾರೆ.