ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಆಂಜನೇಯ ದೇವಸ್ಥಾನದ ವಿದ್ಯುತ್ ಬಿಲ್
ಪಾವತಿಸಿ ಕಗ್ಗತ್ತಲಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಬೆಳಕು ಕೊಡಿ ಎಂದು ಒತ್ತಾಯಿಸಿ
ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ನಡೆಸಿ ಮನವಿ ಸಲ್ಲಿಸಿದರು.
ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀ ಆಂಜನೇಯ ಸ್ವಾಮಿಗೆ ದೇವಸ್ಥಾನದಲ್ಲಿ
ಸಂಜೆಯಾಗುತ್ತಿದ್ದAತೆ ಕತ್ತಲೆ ವಾಸದ ದುರಂತ ಸ್ಥಿತಿ ಒದಗಿಬಂದಿದೆ. ದೇವಾಲಯದಲ್ಲಿ
ಕಳೆದ ನಾಲ್ಕಾರು ದಿನಗಳಿಂದ ವಿದ್ಯುತ್ ನಿಲುಗಡೆಯಾಗಿದೆ. ಪ್ರತಿನಿತ್ಯ ಬೆಳಕಿಗಾಗಿ
ಜನರೇಟರ್ಗಳನ್ನು ಬಳಸಲಾಗುತ್ತಿದೆ. ಭಕ್ತರೇ ಪ್ರತಿನಿತ್ಯ ಡಿಸೇಲ್ ವೆಚ್ಚ
ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ವಿದ್ಯುತ್ ನಿಲುಗಡೆಗೆ ಕಾರಣ ಮುಜರಾಯಿ ಇಲಾಖೆ ಸಕಾಲಕ್ಕೆ ವಿದ್ಯುತ್ ಬಾಕಿ ಪಾವತಿ
ಮಾಡದಿರುವುದಾಗಿದೆ.. ಮೆಸ್ಕಾಂ ಇಲಾಖೆ ಯುವರು ನಗರದ ಪುರಾಣ ಪ್ರಸಿದ್ಧ ಕೋಟೆ ಆಂಜನೇಯ
ಸ್ವಾಮಿ ದೇವಸ್ಥಾನದ ವಿದ್ಯುತ್ ಕಡಿತ ಮಾಡಿದ್ದಾರೆ
. ಹೀಗಾಗಿ ಬೆಳಕಿಗಾಗಿ
ಜನರೇಟರ್ಗಳೇ ಗತಿಯಾಗಿದೆ. ಶಿವಮೊಗ್ಗೆಯ ಐತಿಹಾಸಿಕ ಸುಪ್ರಸಿದ್ಧ ಧಾರ್ಮಿಕ
ಕ್ಷೇತ್ರದಲ್ಲೇ ಈ ಪರಿಸ್ಥಿತಿ ಅಂದರೆ ಆಡಳಿತ ನಡೆಸುತ್ತಿರುವ ಸರ್ಕಾರ ದಿವಾಳಿಯಾಗಿದೆ
ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಈ ದೇವಳಕ್ಕೆ ಸಂಬAಧಿಸಿದAತೆ ಅಭಿವೃದ್ಧಿ ಸಮಿತಿಯನ್ನು ರಾಜ್ಯ ಸರ್ಕಾರ ನೇಮಿಸಿದೆ.
ಅಭಿವೃದ್ಧಿ ಸಮಿತಿಗೆ ವಿದ್ಯುತ್ ಕಡಿತ ಮಾಡಿರುವ ವಿಚಾರದ ಬಗ್ಗೆ ಅರಿವಿದ್ದರೂ
ಸಮಿತಿಯವರು ಸಹ ಸಮಸ್ಯೆ ಬಗ್ಗೆ ಪರಿಹರಿಸುವ ಕಾಳಜಿ ತೋರುತ್ತಿಲ್ಲ.
ಮುಜರಾಯಿ ಇಲಾಖೆ
ಹಾಗೂ ಆಡಳಿತ ನಡೆಸುತ್ತಿರುವ ಸರ್ಕಾರ ಮತ್ತು ಶಿವಮೊಗ್ಗ ಕ್ಷೇತ್ರದ
ಜನಪ್ರತಿನಿಧಿಗಳಿಗೆ ಧಾರ್ಮಿಕ ಕ್ಷೇತ್ರ ಕಗ್ಗತ್ತಲಲ್ಲಿರುವುದು ಅರಿವಿಲ್ಲವೇ. ಕೂಡಲೇ
ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮೆಸ್ಕಾಂ
ಇಲಾಖೆಗೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವಿದ್ಯುತ್
ಬಿಲ್ಲನ್ನು ಪಾವತಿ
ಮಾಡಿ ಕತ್ತಲಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಬೆಳಕು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.
ಪ್ರವೀಣ್ಕುಮಾರ್, ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಪ್ರಮುಖರಾದ ಎಸ್. ಕುಮರೇಶ್,
ಎಂ. ರಾಹುಲ್ , ಪುಷ್ಪಕ್ಕುಮಾರ್, ಎಂ. ರಾಕೇಶ್, ವೆಂಕಟೇಶ್ ಕಲ್ಲೂರು, ಸುಹಾಸ್ ಗೌಡ,
ಮಸ್ತಾನ್ ಇನ್ನಿತರರು ಇದ್ದರು.