ರಾಜ ಮಹಾರಾಜರ ಕಾಲದಿಂದಲೂ ಕ್ರೀಡೆಗಳಿಗೆ ವಿಶೇಷ ಆಧ್ಯತೆ ನೀಡುತ್ತಿದ್ದು, ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಪ್ರತಿಯೊಬ್ಬರು ಕನಿಷ್ಠ ಒಂದು ಗಂಟೆಗಳ ಕಾಲ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಕ್ರೀಯಾಶೀಲತೆ ಹೆಚ್ಚುತ್ತದೆ ಎಂದರು. ಜಿಲ್ಲಾ ಪ್ರಧಾನ ಮತ್ತು ಸತ್ತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಹೇಳಿದ್ದಾರೆ.

ಅವರು ಇಂದು ನಗರದ ಡಿಎಆರ್ ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2022ರನ್ನು ಉದ್ಘಾಟಿಸಿ ಮಾತನಾಡಿದರು. 

ನಮ್ಮ ಸಂಸ್ಕøತಿಯಲ್ಲಿ ಬಂದ ಯೋಗ, ಸೂರ್ಯನಮಸ್ಕಾರವನ್ನು ಮರೆಯಬಾರದು. 108 ಸೂರ್ಯ ನಮಸ್ಕಾರ ಪ್ರತಿನಿತ್ಯ ಹಾಕಿದರೆ 108 ವಾಹನಕ್ಕೆ ದೂರವಾಣಿ ಕರೆ ಮಾಡುವ ಅವಶ್ಯಕತೆ ಬರುವುದಿಲ್ಲ. ಭಾರತದಿಂದ ವಿದೇಶಿಗರು ನಮ್ಮ ಸಂಪತ್ತನ್ನು ಮಾತ್ರ ಒಯ್ಯದೆ

ಸಂಸ್ಕøತಿಯನ್ನು ಕೂಡ ಒಯ್ದಿದ್ದಾರೆ. ನಮ್ಮ ಪರಂಪರೆ ಮತ್ತು ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕು. ಆಟದಲ್ಲಿ ಸೋಲು-ಗೆಲುವು ಸಹಜ. ಆಟದಲ್ಲಿ ಭಾಗವಹಿಸುವುದು ಮುಖ್ಯ. ನಮ್ಮ ದಕ್ಷತೆ ಮತ್ತು ಆರೋಗ್ಯವನ್ನು ರಕ್ಷಿಸಲು ಇದೊಂದು ಸುವರ್ಣಾವಕಾಶ ಕ್ರೀಯಾಶೀಲತೆ ಉಳಿದಿದಿಯೋ ಇಲ್ಲವೋ ನೋಡಲು ಕೂಡ ಈ ಕ್ರೀಡಾಕೂಟ ಸಹಕಾರ ಎಂದರು. 

ಎಲ್ಲರೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಆರೋಗ್ಯವಂತರಾಗಿರಿ. ಕ್ರೀಡೆಯಿಂದ ಒತ್ತಡ ಕೂಡ ದೂರವಾಗುತ್ತದೆ ಎಂದರು. ಕ್ರೀಡಾಕೂಟಕ್ಕು ಮುನ್ನಾ ಪಥಸಂಚಲನ ಮತ್ತು ಕ್ರೀಡಾ ಪಟುಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ವಿಕ್ರಮ್ ಅಮಟೆ ಇದ್ದರು

By admin

ನಿಮ್ಮದೊಂದು ಉತ್ತರ

error: Content is protected !!