
ಶಿವಮೊಗ್ಗ, ಸೆ.15:
ಅದೇನು ಗ್ರಹಚಾರವೋ ಗೊತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 397 ಕೊರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿವೆ.
ಜಿಲ್ಲೆಯ ಒಟ್ಟು ಪಾಸಿಟಿವ್ ಸಂಖ್ಯೆ 11528 ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಇಂದು ಸಹ ಸೋಂಕಿನಿಂದ 5 ಜನ ಸಾವುಕಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 212 ಕ್ಕೇರಿದೆ.
ಇಂದು 1493 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. 1375 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ.
ಇಂದು 369 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 9409 ಕ್ಕೇರಿದೆ. 212 ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 153 ಜನ ಕೊರೋನ ಕೇರ್ ಸೆಂಟರ್ ನಲ್ಲಿ, 287 ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, 1391 ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ 296 ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ 2289 ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್ ಗಳು ಸಹ ಹೆಚ್ಚಾಗಿವೆ.
ನಿನ್ನೆಯ ವರೆಗೆ 5115 ಕಂಟೈನ್ಮೆಂಟ್ ಜೋನ್ ಗಳಿದ್ದ ಜಿಲ್ಲೆಯಲ್ಲಿ ಇಂದು 5294 ಕಂಟೈನ್ಮೆಂಟ್ ಜೋನ್ ಗಳಿವೆ. 1759 ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು 991 ರಷ್ಟೇ ಇದೆ ಎಂದು ಬುಲಿಟಿನ್ ಪ್ರಕಟಿಸಿವೆ.
ತಾಲೂಕು ವಿವರ
ಜಿಲ್ಲೆಯಲ್ಲಿ 397
ಶಿವಮೊಗ್ಗ -212
ಭದ್ರಾವತಿ-48,
ಶಿಕಾರಿಪುರ-56, ತೀರ್ಥಹಳ್ಳಿ-25,
ಸಾಗರ- 30,
ಹೊಸನಗರ-05
ಸೊರಬ- 20
ಹೊರ ಜಿಲ್ಲೆ-01