ಶಿವಮೊಗ್ಗ,
ಕೆ.ಎಸ್. ಈಶ್ವರಪ್ಪನವರ ರಾಜಕೀಯ ದಾಹಕ್ಕೆ ಇನ್ನೆಷ್ಟು ಅಮಾಯಕರು ಬಲಿಯಾಗ ಬೇಕೊ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಎಸ್. ಸುಂದರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಬಂದಮೇಲೆ ಎಲ್ಲಾ ಧರ್ಮದ ಯುವಕರ ಕೊಲೆಗಳಾಗುತ್ತಿವೆ. ಇದಕ್ಕೆ ಕಾರಣ ಕಾಂಗ್ರೆಸ್ ಎಂದು ಈಶ್ವರಪ್ಪ ನವರು ಹೇಳುತ್ತಿರುವುದನ್ನು ನೋಡಿದರೆ ಅವರಿಗೆ ನಾಚಿಕೆ ಆಗಬೇಕು. ಶಿವಮೊಗ್ಗವನ್ನೇ ಉದಾಹರಣೆಗೆ ತೆಗೆದುಕೊಂಡರೆ ಅವರ ೨೫ ವರ್ಷದ ರಾಜಕೀಯ ಜೀವನದಲ್ಲಿ ಧರ್ಮಗಳ ನಡುವೆ ಸಂಘರ್ಷ

ಹುಟ್ಟುಹಾಕಿರುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಹರ್ಷನ ಕೊಲೆ ಯನ್ನೂ ರಾಜಕಾರಣಗೊಳಿಸಿದರು. ಅದರ ಲಾಭ ಪಡೆದರು. ನಗರದಲ್ಲಿ ಗಲಾಟೆ ಎಬ್ಬಿಸಿ ದರು. ಜನಜೀವನವನ್ನು ಅಸ್ತವ್ಯಸ್ತಗೊಳಿಸಿದರು. ಇದೆಲ್ಲವೂ ಅವರ ಅಧಿಕಾರದ ಹಪಾಹಪಿ ತನವೇ ಆಗಿದೆ ಎಂದರು.

ಬ್ರಿಟಿಷರ ಆಡಳಿತಕ್ಕೂ ಬಿಜೆಪಿಯವರ ಆಡಳಿತಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಬಡ ವರ ಹಣ ಕಸಿದು ಉಳ್ಳವರಿಗೆ ನೀಡಿ ದೇಶ ವನ್ನು ಕೊಳ್ಳೆ ಹೊಡೆದು ಜನರನ್ನು ಸಂಕಷ್ಟಕ್ಕೆ ದೂರಿದ್ದಾರೆ. ಅಭಿವೃದ್ಧಿಯನ್ನು ಇಟ್ಟುಕೊಂಡು ಮತ ಕೇಳುವುದನ್ನು ಬಿಟ್ಟು ಧರ್ಮ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದು ಅಧ ರ್ಮದ ದಾರಿ ತುಳಿಯುತ್ತಿದ್ದಾರೆ. ಈಶ್ವರಪ್ಪನ ವರೇ ಸಾಕು. ಧರ್ಮಗಳ ನಡುವೆ ಬೆಂಕಿ ಹಚ್ಚಲು. ಇನ್ನೇನು ನಗರದಲ್ಲಿ ಶಾಂತಿ ಸ್ಥಾಪನೆ ಆಗುತ್ತದೆ ಎಂದರೆ ಸಾಕು ಕೆಲಸಕ್ಕೆ ಬಾರದ ವಿಷಯ ಮುಂದಿಟ್ಟುಕೊಂಡು ಶಾಂತಿ ಕದಡು ವಲ್ಲಿ ಈಶ್ವರಪ್ಪನವರದ್ದು ಎತ್ತಿದ ಕೈ ಎಂದರು.

ಬಿಜೆಪಿಯವರಿಗೆ ಸಾವರ್ಕರ್ ಇಷ್ಟು ವರ್ಷ ಗೊತ್ತಿರಲಿಲ್ಲವೇ .ಈಗ ಒಬ್ಬಸಾಮಾನ್ಯ ಮನುಷ್ಯನನ್ನು ವಿಜೃಂಭಿಸುವ ಅವಶ್ಯಕತೆ ಯಾಧರೂ ಏನಿದೆ ಅದರಲ್ಲೂ ಈಶ್ವರಪ್ಪ ನವರು ಅವರ ಮೊಮ್ಮಗನನ್ನು ಕರೆಸುವ ಅವಶ್ಯತೆ ಇತ್ತೇ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಕೋಟಿ ಜನರು ಹೋರಾಡಿದ್ದಾರೆ. ಅವರ ಮೊಮ್ಮಕ್ಕಳಿಲ್ಲವೇ ಎಂದು ಟೀಕಿಸಿದರು.

ಬಿ.ಎಸ್. ಯಡಿಯೂರಪ್ಪನವರನ್ನು ನೋಡಿ ಈಶ್ವರಪ್ಪ ಕಲಿಯಬೇಕು. ಯಡಿಯೂ ರಪ್ಪನವರು ಬಿಜೆಪಿಯವರೇ. ಆದರೆ ಧರ್ಮಗಳ ನಡುವೆ ಅವರೆಂದೂ ಶಾಂತಿ ಕದಡುವಂತ ಮಾತುಗಳನ್ನು ಆಡುವುದಿಲ್ಲ. ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೇಖಾ ರಂಗನಾಥ್, ಸಿ.ಎಸ್.ಚಂದ್ರಭೂ ಪಾಲ್, ಚಂದ್ರಶೇಖರ್, ಮುಜೀಬ್, ಚಂದನ್, ಖಲೀಂಪಾಷಾ ಇತರರಿದ್ದರು.