,
ಶಿವಮೊಗ್ಗ, ಅ.22:
ಎಷ್ಟು ಹೇಳಿದರೂ ಈ ಆಟೋದವರಿಗೆ ಬುದ್ಧಿ ಬರುವಂತಿಲ್ಲ. ಬಂದೂ ಇಲ್ಲ. ಇವರಲ್ಲಿ ಬೆರಳೆಣಿಕೆಯಷ್ಟು ಪ್ರಾಮಾಣಿಕರು ಈ ದಂದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಬಹಳಷ್ಟು ಜನ ಮೀಟರ್ ಅಳವಡಿಸಿ ಎಂದರೂ ಕೇಳದೆ ಸಿಕ್ಕಾಪಟ್ಟೆ ದುಡ್ಡು ಕೇಳುತ್ತಾ, ಪ್ರಯಾಣಿಕರನ್ನು ಸತಾಯಿಸುತ್ತಿರುವ ದೃಶ್ಯಗಳು ನಿತ್ಯ ನಿರಂತರ ನಡೆಯುತ್ತಲೇ ಇವೆ.
ಇಂದು ಬೆಳಿಗ್ಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ರೈಲು ಬಂದಾಗ ಕೇವಲ ಅಲ್ಲಿಂದ ಉಷಾ ನರ್ಸಿಂಗ್ ಬಳಿಗೆ ಒಬ್ಬ ಆಟೋ ಚಾಲಕ ಬರೋಬ್ಬರಿ 140 ರೂ. ಕೇಳಿದ್ದಾರೆ. ಜಾಸ್ತಿ ಆಯ್ತಲ್ಲವೇ ಒಂದು ಕಿಲೋಮೀಟರ್ ಇರಬಹುದಷ್ಟೇ ಎಂದು ಕೇಳಿದಾಗ ಎಂದು ಅದೇ ದಿಮಾಕಿನಲ್ಲಿ ಮಾತನಾಡಿದ್ದಾನೆ.
ಸರಿ ಮುಂದೆ ಹೋಗಿ ಮತ್ತೊಂದು ಆಟೋ ಕೇಳಿದಾಗ 120 ಎಂದಿದ್ದಾನೆ. ವಿಧಿ ಇಲ್ಲದೆ ಅನಿವಾರ್ಯವಾಗಿ ಆ ಆಟೋದಲ್ಲಿ ಆ ಪ್ರಯಾಣಿಕರು ಒಬ್ಬರು ಬಂದಿದ್ದಾರೆ. ಇದು ಹಣಕಾಸು ಸ್ಥಿತಿ ಚೆನ್ನಾಗಿರುವವರ ಪ್ರಾಮಾಣಿಕ ಕಳಕಳಿಯ ಮಾತು. ಮಧ್ಯಮ ಹಾಗೂ ಕಡುಬಡತನದ ಜನ ಹೇಗೆ ತಾನೇ ಇಂತಹ ದುಬಾರಿ ವೆಚ್ಚವನ್ನು ನಿಭಾಯಿಸಲು ಸಾಧ್ಯ.?
ಶಿವಮೊಗ್ಗದ ಇಂಜಿನಿಯರ್ ಒಬ್ಬರು ಇಂದು ಬೆಳಗ್ಗೆ ನಡೆದ ಈ ಹಣದ ಎತ್ತುವಳಿಯ ವಿಷಯವನ್ನು ಹಾಗೂ ಆಟೋ ಚಾಲಕರು ರೈಲ್ವೆ ನಿಲ್ದಾಣದಲ್ಲಿ ಮಾಡುವ ತಂದೆಯ ಬಗ್ಗೆ ತುಂಗಾತರಂಗ ಪತ್ರಿಕೆ ಮೂಲಕ ಸಂಬಂಧಪಟ್ಟ ಆರ್ ಟಿ ಓ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಹಣ ನೀಡಿ ಬಂದ ಇದೇ ಇಂಜಿನಿಯರ್ ನೋವಿನ ಒಂದು ಮಾತು ಹೇಳಿದ್ದಾರೆ. ಪಾಪ ಎಲ್ಲರಿಂದ ಯದ್ವಾತದ್ವಾ ವಸೂಲಿ ಮಾಡುತ್ತಾರೆ. ದಯಮಾಡಿ ತಪ್ಪಿಸಿ. ಆರ್‌ಟಿಓ ಈ ವಿಷಯದಲ್ಲಿ ಗಮನಿಸಬೇಕಿದೆ. ಎಸಿ ಕಛೇರಿ ಬಿಟ್ಟು ಹೊರಬರಲಿ.
ಪ್ರಯಾಣಿಕ ತನ್ನ ಕರ್ತವ್ಯ ಹಾಗೂ ಕೆಲಸ ಆಗಬೇಕೆಂಬ ಕಳಕಳಿಯಲ್ಲಿ ಹೋಗಿರುತ್ತಾನೆ.
ಅಂತಹ ಹೊತ್ತಿನಲ್ಲಿ ದುಬಾರಿಯಾಗಿ ಹಣ ವಸೂಲಿ ಮಾಡುವ ಇಂತಹ ಆಟೋ ಚಾಲಕರ ವಿರುದ್ಧ ದೂರು ನೀಡುವ ಜನರೇ ಕಮ್ಮಿ. ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಆರ್ಟಿಓ ಇಲಾಖೆಯ ಅಧಿಕಾರಿಗಳು ತಾವೇ ಬದಲಾವಣೆಯ ದೇಶದ ವೇಷದಲ್ಲಿ ಅಲ್ಲಿಗೆ ಹೋಗಿ ಒಮ್ಮೆ ಪರಿಶೀಲಿಸಬೇಕು. ಅಗತ್ಯವಿದ್ದ ಕಡೆ ಒಂದಿಷ್ಟು ಜನರ ಮೇಲೆ ದೂರು ದಾಖಲಿಸಬೇಕು. ತಪ್ಪು ಕಂಡುಬಂದರೆ ಅವರ ಡಿಎಲ್ ರದ್ದು ಮಾಡಬೇಕು. ಒಂದು ಎತ್ತಿಗೆ ಹೊಡೆದರೆ ಪಕ್ಕದ ಎತ್ತು ಎಚ್ಚೆತ್ತುಕೊಳ್ಳುವಂತೆ ಅವರು ಅಂದರೆ ಉಳಿದವರು ಎಚ್ಚೆತ್ತುಕೊಳ್ಳಬಹುದು. ಧಮಕಿ ಹಾಕುವುದು ಒಂದು ಕಡೆಯಾದರೆ, ಅನಿವಾರ್ಯವಾಗಿ ಬೇಕಾಬಿಟ್ಟಿ ವಸೂಲಿ ಮಾಡುವ ದಂದೆಯನ್ನು ತಪ್ಪಿಸುವ ಅನಿವಾರ್ಯತೆ ಇದೆ ಎಂದಿರುವ ಆ ಇಂಜಿನಿಯರ್ ಸಾಹೇಬರ ಪ್ರೀತಿಯ ಕಳಕಳಿಯ ಮನವಿಗೆ ತುಂಗಾತರಂಗ ಸಾರ್ವಜನಿಕ ಉದ್ದೇಶವನ್ನು ಮುಂದಿಟ್ಟುಕೊಂಡು, ಓದುಗರ ಗಮನಕ್ಕೆ ಮಾಹಿತಿ ನೀಡುವ ಜೊತೆಗೆ ಅಧಿಕಾರಿಗಳಿಗೆ ಇತ್ತ ಗಮನಿಸುವಂತೆ ವಿನಂತಿಸುತ್ತಿದೆ. ವಿವರಕ್ಕೆ 9448256283