ಶಿವಮೊಗ್ಗ, ಅ.21:
ಕೇಂದ್ರೀಯ ವಿದ್ಯಾಲಯಗಳ ರಾಷ್ಟೀಯ ಸ್ಕೇಟಿಂಗ್ ಪಂದ್ಯದಲ್ಲಿ ಶಿವಮೊಗ್ಗ ನ್ಯೂ ಹಾಟ್ ವ್ಹೀಲ್ಸ್ ವಿದ್ಯಾರ್ಥಿ ನಿಕುಂಜ್ ರಿಗೆ ಎರಡು ಚಿನ್ಬ/ ಒಂದು ಬೆಳ್ಳಿ
ನವದೆಹಲಿಯಲ್ಲಿ ಕಳೆದೆರಡು ದಿನದಿಂದ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ನ್ಯೂ ಹಾಟ್ ವ್ಹೀಲ್ಸ್ ಸ್ಕೇಟಿಂಗ್ ಸಂಸ್ಥೆಯ ವಿದ್ಯಾರ್ಥಿ ನಿಕುಂಜ್ ಹೆಚ್.ಪಿ. ಅವರು ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಶಿವಮೊಗ್ಗ ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಪಡೆಯುತ್ತಿರುವ ನಿಕುಂಜ್ ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದ ಎಂಟನೇ ತರಗತಿಯ ವಿದ್ಯಾರ್ಥಿ.
ವಕೀಲರಾದ ಪ್ರವೀಣ್ ಹಾಗೂ ಪವಿತ್ರಾ ದಂಪತಿಗಳ ಪುತ್ರ ನಿಕುಂಜ್ ಅವರು ನ್ಯೂ ಹಾಟ್ ವ್ಹೀಲ್ಸ್ ಸ್ಕೇಟಿಂಗ್ ಸಂಸ್ಥೆಯ ತರಬೇತುದಾರ ಆರ್. ವಿಶ್ವಾಸ್ ಅವರಿಂದ ಪರಿಣಿತರಾಗಿದ್ದಾರೆ.
ಇಲ್ಲಿಯವರಿಗೆ ನ್ಯೂ ಹಾಟ್ ವ್ಹೀಲ್ಸ್ ಸ್ಕೇಟಿಂಗ್ ಸಂಸ್ಥೆಯಿಂದ ತರಬೇತಿ ಪಡೆದ ಐದು ವಿದ್ಯಾರ್ಥಿಗಳು ಕೇಂದ್ರೀಯ ವಿದ್ಯಾಲಯಗಳ ಕ್ರೀಡಾಕೂಟದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.
ಅಭಿನಂದನೆ: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ನಿಕುಂಜ್ ಅವರಿಗೆ ನ್ಯೂ ಹಾಟ್ ವ್ಹೀಲ್ಸ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷ ಶಿ.ಜು.ಪಾಶಾ, ಉಪಾಧ್ಯಕ್ಷ ಎಸ್.ಕೆ. ಗಜೇಂದ್ರಸ್ವಾಮಿ, ಕಾರ್ಯದರ್ಶಿ ಎಂ. ರವಿ, ಜಿ. ಪದ್ಮನಾಭ್, ಉಮಾ ಅವರು ಸಂಸ್ಥೆ ಪರವಾಗಿ ಅಭಿನಂದಿಸಿದ್ದಾರೆ.