ಶಿವಮೊಗ್ಗ/ ಹುಡುಕಾಟದ ವರದಿ: ಸ್ವಾಮಿ

ಮಾಜಿ ಮುಖ್ಯಮಂತ್ರಿ, ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಪ್ರಕರಣದ ವಿವಾದವು ಶಿವಮೊಗ್ಗದಲ್ಲೂ ಹರಿದಾಡತೊಡಗಿದೆ ಎಂದು ಬಲ್ಲ ಮೂಲಗಳು ಸ್ಪಷ್ಟಪಡಿಸುತ್ತಿವೆ.

ಇಲ್ಲಿಯವರೆಗೆ ಬೆಂಗಳೂರು ವಿಭಾಗದಲ್ಲಿ ಸುಮಾರು ಎಂಟರಿಂದ ಹತ್ತು ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಅಂದಿನ ಸಮಯದಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳ ಸುತ್ತ ಈ ವಿಚಾರವು ಸುತ್ತತೊಡಗಿದೆ. ಜಿಲ್ಲೆಯಲ್ಲಿ ಇಂತಹ ಸುಮಾರು ಹತ್ತಕ್ಕೂ ಅಧಿಕ ಹೆಚ್ಚು ಪ್ರಕರಣಗಳು ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಶಿಕ್ಷಕರ ನೇಮಕಾತಿ ಅಕ್ರಮದ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಉನ್ನತ ಅಧಿಕಾರಿಗಳು ಅದರಲ್ಲೂ ಇಲಾಖೆಯ ಮೇಲ್ಪಂಕ್ತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಯಾ ಜಿಲ್ಲಾಮಟ್ಟದ ಶಿಕ್ಷಣ ಇಲಾಖೆ ಡಿಡಿಪಿಐ ಬಿಇಓ ಸೇರಿದಂತೆ ಅಲ್ಲಿನ ಕಚೇರಿಯ ಸಿಬ್ಬಂದಿಗಳ ಬುಡದ ಮೂಲಗಳನ್ನು ರಾಜ್ಯಾದ್ಯಂತ ಕೆದಕಲಾಗುತ್ತಿದೆ.

ಇಂತಹ ಮಾತುಕತೆಗಳು ಶಿವಮೊಗ್ಗ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಹಾಗೂ ನೌಕರರ ವರ್ಗದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ ಈ ಚರ್ಚೆಯ ನಡುವೆ ಹಿಂದಿನ ಆರೋಪಗಳ ಕುರಿತಂತೆ ಈಗಾಗಲೇ ಒಂದು ಹಂತದ ವಿಚಾರಣೆ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಇದೇ ರೀತಿ ಸಿಐಡಿ ಕೆಲಸ ಹೋದಾಗ ಚಿಕ್ಕ ಸುಳುಹುವಿನ ಅನುಸಾರ ಶಿವಮೊಗ್ಗ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳು ನಡೆದಿದೆ ಎನ್ನಲಾಗುತ್ತದೆ ಅಂದು ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂದಿನ ಸಮಯದಲ್ಲಿ ಕೆಲಸ ಮಾಡಿದ್ದ ಉಪನಿರ್ದೇಶಕರು ಸೇರಿದಂತೆ ಹಲವರು ಈ ಬೋನಿನೊಳಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಳವಾಗಿವೆ ಎನ್ನಲಾಗುತ್ತದೆ.

ರಾಜ್ಯದಲ್ಲಿ ಬೆಳಕಿಗೆ ಬಂದ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಚಾರ ಈಗ ನೂರರ ಗಡಿ ದಾಟಿ ಬಹಳ ದಿನವಾಗಿದೆ. ಶಿವಮೊಗ್ಗ ವ್ಯಾಪ್ತಿಯಲ್ಲೂ ಇಂತಹ ಪ್ರಕರಣಗಳಿಗೆ ಎಂಬುದರ ಹುಡುಕಾಟ ಸಿಐಡಿ ಯಿಂದ ನಡೆಯುತ್ತಿದೆ.

By admin

ನಿಮ್ಮದೊಂದು ಉತ್ತರ

error: Content is protected !!