ಶಿವಮೊಗ್ಗ,ಸೆ.30:

ನಿಮ್ ಮೊಬೈಲ್ ನಿಮ್ ನೆಟ್‌ ನಿಮ್ ಹಿಡಿತದಲ್ಲಿರಲಿ. ಅಶ್ಲೀಲ ವೀಡಿಯೋ ಶೇಎ್ ಮಾಡಿದ್ರೆ ಕಾನೂನು ಬಿಡೊಲ್ಲ. ಅಂತಹದೊಂದು ತೀರ್ಪು ಇಂದಿಲ್ಲಿ ಶಿವಮೊಗ್ಗ ನ್ಯಾಯಾಲಯದಲ್ಲಿ ಹೊರಬಿದ್ದಿದೆ. ಅದೂ ಅಪ್ರಾಪ್ತರ ವಿಚಾರದಲ್ಲಿ ಕಾನೂನು ಸೂಕ್ಷ್ಮವಾಗಿದೆ.

ಸಮಗ್ರ ವಿವರಣೆ ಇಲ್ಲಿದೆ ನೋಡಿ
ಸೊರಬ ತಾಲ್ಲೂಕಿನ ವಾಸಿಯಾದ ತಿಮ್ಮಪ್ಪ, 42 ವರ್ಷ ಈತನು ಅಪ್ರಾಪ್ತ ವಯಸ್ಸಿನ ಬಾಲಕ/ ಕಿಯರ ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಬಗ್ಗೆ ಸೈಬರ್ ಟಿಪ್ ಲೈನ್ ನಿಂದ ಬಂದ ದೂರಿನ ಮೇರೆಗೆ ದಿನಾಂಕಃ- 12-01-2020 ರಂದು ಶಿವಮೊಗ್ಗ ಜಿಲ್ಲೆಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಮಾಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಗುರುರಾಜ್‌, ಕೆ.ಟಿ, ಪಿಐ, ಸಿಇಎನ್‌ ಪೊಲೀಸ್‌ ಠಾಣೆರವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.


ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, ಮಾನ್ಯ Addl District and Sessions Judge, FTSC–I (POCSO) Shivamogga ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶರಾದ ಶ್ರೀಮತಿ ಲತಾ ರವರು ದಿನಾಂಕ 30-09-2022 ರಂದು ಆರೋಪಿ ತಿಮ್ಮಪ್ಪ, 42 ವರ್ಷ, ಸೊರಬ ತಾಲ್ಲೂಕು ಈತನ ವಿರುದ್ಧ ಪೋಕ್ಸೋ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು 1,44,000/- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 3 ವರ್ಷಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!