:
ನಗರದ ಹೊರವಲಯದ ವಿರುಪಿನಕೊಪ್ಪ ಬಳಿ ಇರುವ ಖಾಸಗಿಯ ಕರಣ್ಸ್ ಸ್ವಿಮ್ಮಿಂಗ್ ಫೂಲ್ನಲ್ಲಿ ಈಜಲು ಹೋಗಿದ್ದ ರಾಕೇಶ್ ಎಂಬ ಯುವಕನ ಸಾವಿಗೆ ಸಂಬಂಧಿಸಿದಂತೆ ಈಜುಕೊಳದ ಮಾಲೀಕನ ವಿರುದ್ಧ ದೂರು ದಾಖಲಿಸಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತ ರಾಕೇಶ್ನ ತಂದೆಯ ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ್ದು, ಈಜುಕೊಳದ ಮಾಲೀಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ರಾಕೇಶ್ (೧೮) ಜೋಸೆಫ್ ನಗರದ ನಿವಾಸಿ ಯಾಗಿದ್ದು, ದ್ವಿತೀಯ ಪಿಯುಸಿ

ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಈ ಈಜುಕೊಳದಲ್ಲಿ ಯಾವುದೇ ಮುಂಜಾಗ್ರತೆ ವ್ಯವಸ್ಥೆ ಇಲ್ಲದಿರುವುದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ.


ಈ ಹಿಂದೆಯೂ ಕೂಡ ಇಂತದೇ ಪ್ರಕರಣ ನಡೆದಿದ್ದು, ಯುವಕನೊಬ್ಬ ಮೃತಪಟ್ಟಿದ್ದ. ಆಗಲೂ ಕರಣ್ ಪೋಷಕರು ದೂರು ನೀಡಿ, ಎಫ್ಐಆರ್ ದಾಖಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎನ್ನಲಾಗಿದೆ.