ಶಿವಮೊಗ್ಗ: ರೋಟರಿ ಕ್ಷಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ನವರಾತ್ರಿಯ ಅಂಗವಾಗಿ ಅ.1 ರ ಸಂಜೆ 5.30ಕ್ಕೆ ಸಾಗರ ರಸ್ತೆಯಲ್ಲಿರುವ ಕಾಸ್ಮೋ ಕ್ಲಬ್ನಲ್ಲಿ ದಾಂಡಿಯಾ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಜೆ.ಪಿ. ಚಂದ್ರು ತಿಳಿಸಿದರು.

ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಉತ್ಸವದಲ್ಲಿ ದಾಂಡಿಯಾ ನೃತ್ಯ, ಫನ್ ಗೇಮ್ಸ್, ವಿವಿಧ ಸೆಲ್ಫಿ ಬೂತ್ ಗಳಿದ್ದು, ಚಟ್ಫಟ್ ಉಪಹಾರ ಹಾಗೂ ರಾತ್ರಿ ಔತಣದೂಟವಿರುತ್ತದೆ ಎಂದರು.

ಮಹಿಳೆಯರಿಗೆ, ದಂಪತಿಗಳಿಗೆ ಹಾಗೂ ಮಕ್ಕಳಿಗೆ ಮಾತ್ರ ಅವಕಾಶವಿದೆ. ದಂಪತಿಗಳು ತಮ್ಮ ಮಕ್ಕಳನ್ನು ಕರೆ ತರಬಹುದು. ಭಾಗವಹಿಸಲು ದಂಪತಿಗಳಿಗೆ 800 ರೂ. ಮಕ್ಕಳಿಗೆ 250 ಹಾಗೂ ಮಹಿಳೆಯರಿಗೆ ಒಬ್ಬರಿಗೆ 500 ರೂ. ನೊಂದಣಿ ಶುಲ್ಕವಿದೆ. ಹೆಚ್ಚಿನ ಮಾಹಿತಿಗಾಗಿ 9448007619 ಅಥವಾ 9845329295ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.

ಕ್ಲಬ್ ಹಲವರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಕಳೆದ ವರ್ಷವು ಸಹ ದಾಂಡಿಯಾ ಉತ್ಸವ ನಡೆಸಿದ್ದು, ಇದರಲ್ಲಿ ಉಳಿದಿದ್ದ 30 ಸಾವಿರ ರೂ.ಗಳನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡಲಾಗಿದೆ. ಶಿಕ್ಷಣ ವಂಚಿತ ಬಡಮಕ್ಕಳ ವಿದ್ಯಾಭ್ಯಾಸ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಬಸವರಾಜ್, ಪ್ರಮುಖರಾದ ಕಿರಣ್, ಸವಿತಾ, ರಮೇಶ್, ರಾಜೇಶ್ವರಿ ಸಿಂಗ್, ಜಗದೀಶ್, ಧರ್ಮೇಂದ್ರಸಿಂಗ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು