![file7ichmtwd2o5lfue5fnn1637393649](https://tungataranga.com/wp-content/uploads/2022/09/file7ichmtwd2o5lfue5fnn1637393649.jpg)
ಕುವೆಂಪು ರಂಗ ಮಂದಿರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲ್ಲೂಕು ಪಂಚಾಯತಿ ಶಿವಮೊಗ್ಗ ಇವರ ವತಿಯಿಂದ ಬಸವ ವಸತಿ ಯೋಜನೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ 37 ಗ್ರಾಮ ಪಂಚಾಯತಿ ಯಿಂದ ಆಯ್ಕೆಯಾದ 920 ಫಲಾನುಭವಿಗಳಿಗೆ ,ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಕಾಮಗಾರಿ ಆದೇಶ ಪತ್ರವನ್ನು ವಿತರಿಸಿ.
![](http://tungataranga.com/wp-content/uploads/2022/09/Shivamogga-1.jpg)
ರಾಜ್ಯದ ಬಿ.ಜೆ.ಪಿ ಸರ್ಕಾರದ ಸನ್ಮಾನ್ಯ ಯಡಿಯೂರಪ್ಪನವರ ಹಾಗೂ ಬಸವರಾಜ್ ಬೊಮ್ಮಯಿ ಅವರ ಅವದಿಯಲ್ಲಿ ಸಾಕಷ್ಟು ಮನೆಗಳು ಬಂದಿದ್ದು. ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
![](http://tungataranga.com/wp-content/uploads/2022/09/Shivamogga-3.jpg)
ಜಿಲ್ಲಾಧ್ಯಕ್ಷರಾದ ಮೇಘರಾಜ್ ರವರು, ಭದ್ರ ಕಾಡ ಅಧ್ಯಕ್ಷರು ಪವಿತ್ರ ರಾಮಯ್ಯನವರು, ಕಾರ್ಪೊರೇಟರ್ ವಿಶ್ವಾಸ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್, ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು, ಫಲಾನುಭವಿಗಳು, ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.