![8](https://tungataranga.com/wp-content/uploads/2022/09/8-scaled.jpg)
ಹನ್ನೊಂದು ತಿಂಗಳ ಮಗು ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಛಾಯಾಗ್ರಾಹಕ ದೇವರಾಜ್ ಅವರ ಪುತ್ರ ಅಕ್ಷಯ್ ಎಂದು ತಿಳಿದು ಬಂದಿದೆ. ಮಹಾಲಯ ಅಮವಾಸ್ಯೆ ಕಾರಣ
![](http://tungataranga.com/wp-content/uploads/2022/09/2.jpg)
ಕುಟುಂಬಸ್ಥರು ವಾಹನ ತೊಳೆಯಲು ಪೂಜೆ ಮಾಡುವ ಕಡೆ ಗಮನ ಕೊಟ್ಟ ಸಂದರ್ಭದಲ್ಲಿ ಅಂಬೆಗಾಲು ಇಡುತ್ತಿದ್ದ ಮಗು ಅರಿವಿಲ್ಲದೆ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ.
![](http://tungataranga.com/wp-content/uploads/2022/09/3.jpg)
ಸ್ವಲ್ಪ ಹೊತ್ತಿನ ನಂತರ ಮಗುವಿನ ತಾತ ವಾಹನ ತೊಳೆಯಲು ನೀರಿಗಾಗಿ ತೊಟ್ಟಿಯಲ್ಲಿ ಬಗ್ಗಿ ನೋಡಿದಾಗ ಮಗುವನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ.
![](http://tungataranga.com/wp-content/uploads/2022/09/4.jpg)
ಮೃತ ಮಗುವಿನ ಮೊದಲ ವರ್ಷದ ಜನ್ಮದಿನ ಕೆಲವೇ ದಿನಗಳಲ್ಲಿ ಅಚರಿಸಲು ಕುಟುಂಬಸ್ಥರು ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಆದರೆ ದುರ್ಘಟನೆಯಲ್ಲಿ ಮಗು ಸಾವನ್ನಪ್ಪಿದೆ. ಮಗುವಿನ ಅಂತ್ಯಕ್ರಿಯೆಯಲ್ಲಿ ಬಹುತೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು.