ರಾಜ್ಯಮಟ್ಟದ ಡೊಳ್ಳು, ವೀರಗಾಸೆ ಮತ್ತು ತಮಟೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಜಿ ಆಹ್ವಾನ
ಶಿವಮೊಗ್ಗ ಮಹಾನಗರ ಪಾಲಿಕೆಯು ದಿ: ೨೭/೦೯/೨೦೨೨ ರಿಂದ ದಿ: ೨೮/೦೯/೨೦೨೨ ರವರೆಗೆ ರಾಜ್ಯ ಮಟ್ಟದ ಡೊಳ್ಳು, ವೀರಗಾಸೆ ಮತ್ತು ತಮಟೆ ಚರ್ಮ ವಾದ್ಯಗಳ ಸ್ಪರ್ಧೆಗಳನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.


ಆಸಕ್ತ ಸ್ಪರ್ಧಾರ್ಥಿಗಳು ದಿ: ೨೫/೦೯/೨೦೨೨ ರೊಳಗಾಗಿ ರಾಷ್ಟ್ರೀಯ ಮಟ್ಟದ ತೀರ್ಪುಗಾರ ವಿದ್ವಾನ್ ಮಹೇಂದ್ರ ಘೋರೆಯವರನ್ನು (ದೂ.ಸಂ.: ೭೭೬೦೨೫೪೬೨೨/ ೯೮೪೪೪೨೦೪೦೦) ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಪಾಲಿಕೆ ಸಾಂಸ್ಕೃತಿಕ ದಸರಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಫೈಬರ್ ವಾದ್ಯಗಳ ಬಳಕೆಗೆ ಅವಕಾಶವಿಲ್ಲ. ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರತ್ಯೇಕವಾದ ಸ್ಪರ್ಧೆಗಳಿರುವುದಿಲ್ಲ. ಎಲ್ಲಾ ಸ್ಪರ್ದೇಗಳಲ್ಲಿ ವಿಜೇತ ತಂಡಗಳಿಗೆ ಪ್ರತ್ಯೇಕ ಬಹುಮಾನ ವಿತರಿಸಲಾಗುವುದು.

By admin

ನಿಮ್ಮದೊಂದು ಉತ್ತರ

error: Content is protected !!