ಶಿವಮೊಗ್ಗ : ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಯಿಂದ  ಶ್ರೇಷ್ಠರಾಗುವುದಿಲ್ಲ  ಸಮಸ್ಯೆಗಳನ್ನು ಎದುರಿಸಲು ಅಂತರಂಗವನ್ನು ಬಲಶಾಲಿಯಾಗಿಸಿಕೊಂಡಾಗ   ಶ್ರೇಷ್ಠರಾಗುತ್ತಾರೆ ಎಂದು ವಾಗ್ಮಿ ಆದರ್ಶ್ ಗೋಖಲೆ ಹೇಳಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವ್ಯಕ್ತಿ ಸಮಾಜದ ಆಸ್ತಿಯಾಗಬೇಕು. ಆಗ  ಮಾತ್ರ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಗುರುಕುಲ ಮಾದರಿಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಜೀವನದಲ್ಲಿ ಎಲ್ಲಾ ಸಂದರ್ಭಗಳನ್ನು ಸತ್ಯ ಹೇಳಬೇಕು. ಧರ್ಮದಲ್ಲಿ ನಡೆಯಬೇಕು. ಸ್ವಅಧ್ಯಯನ ಬಗ್ಗೆ ಆಸಕ್ತಿ ಹೊಂದಬೇಕು. ಇವುಗಳನ್ನು ಬೆಳೆಸಿಕೊಂಡಾಗ  ಪರಿಪೂರ್ಣ ವ್ಯಕ್ತಿಗಳಾಗುತ್ತೀರ ಅಲ್ಲದೇ ನಿಮ್ಮೆಲ್ಲರ ಜ್ಞಾನ   ವಿಕಸನ ಹೊಂದುತ್ತದೆ ಎಂದರು.

ನಮಗೆ ತಿಳಿದಿರುವ ವಿಷಯವನ್ನು ಇನ್ನೊಬ್ಬರು  ಹೇಳುವುದರಿಂದ  ಜ್ಞಾನ   ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

     ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ  ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ  ಶ್ರೀ ಶ್ರೀ  ಪ್ರಸನ್ನನಾಥ ಸ್ವಾಮೀಜಿ ಮಾತಾನಡಿ, ನಮ್ಮ  ನೆನಪಿನ l ಶಕ್ತಿ ಯನ್ನುಬೆಳೆಸಲು ಯಾವುದೇ ಔಷಧಿಗಳಿಲ್ಲ.  ಇಷ್ಟಪಟ್ಟು ಕೇಳುವುದು, ಬರೆಯುವುದನ್ನು ಹಾಗೂ ತಿಳಿದುಕೊಳ್ಳುವುದನ್ನು ರೂಢಿಸಿಕೊಳ್ಳಿರಿ , ಹಾಗೆಯೇ ನಿಮ್ಮ  ನೆನಪಿನ ಶಕ್ತಿ ವೃದ್ಧಿಸುತ್ತದೆ  ಹಾಗೂ ನಿಮ್ಮ ವ್ಯಕ್ತಿತ್ವ ವಿಕಸನ ವಾಗುತ್ತದೆ ಎಂದು ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.

       ನಿಮ್ಮ ನಿಮ್ಮ ಶರೀರಕ್ಕೆ, ನಾವೇ ಒಳ್ಳೆಯ ವೈದ್ಯರಾಗಲು ಸಾಧ್ಯ. ಮನಸ್ಸಿನ ಕೃಡೀಕರಣ  ಹಾಗೂ ಹಿಡಿತಕ್ಕೆ ನಮಗೆ ನಾವೇ ವೈದ್ಯರಾಗಬೇಕು ಎಂದು ಮಕ್ಕಳಿಗೆ ಶ್ರೀಗಳು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ವಾಸಪ್ಪ ಗೌಡ ಕೊಳಗಿ, ಸತೀಶ್. ಡಿ.ವಿ. ಅನನ್ಯ ಸಂಸ್ಥೆಯ  ಕಾರ್ಯದರ್ಶಿ ಆರ್. ಗಿರೀಶ್  ಪ್ರಾಂಶುಪಾಲರಾದ  ಗುರುರಾಜ್ , ಶ್ರೀಮತಿ  ಹೇಮಾ ಎಸ್. ಆರ್ , ಸುರೇಶ್ ಎಸ್. ಎಚ್  ಮುಂತಾದವರು ಇದ್ದರು.

      ಹಿಂದೆಂದೋ  ನೋಡಿದ ಸಿನಿಮಾದ ಕಥೆ, ನಾಯಕ, ಇತರೆ ಎಲ್ಲಾ  ವಿಚಾರಗಳನ್ನು  ನೆನಪಿನಲ್ಲಿಟ್ಟುಕೊಳ್ಳುವ ನೀವು ಹಿಂದಿನ ದಿನವಷ್ಟೆ ಮಾಡಿದ ಪಾಠವನ್ನು ಏಕ ಮರೆತು ಬಿಡುತ್ತೀರಾ ಗೊತ್ತಾ? ಹತ್ತಾರು ವರ್ಷದ ಹಿಂದಿನ ಚಲನಚಿತ್ರವನ್ನು ಇಷ್ಟಪಟ್ಟು ನೋಡಿದ್ದೀರಿ, ನಿನ್ನೆಯ ಪಾಠವನ್ನು ಕಷ್ಟಪಟ್ಟು ಹೇಳಿದ್ದೀರಿ ಅಷ್ಟೇ! ಪಾಠವನ್ನು ಇಷ್ಟಪಟ್ಟು ಕೇಳಿದರೆ ನೀವು ಶಿಕ್ಷಣದಲ್ಲಿ ಯಶಸ್ಸು ಕಾಣಲು ಸಾಧ್ಯ.  ಶ್ರೀ ಪ್ರಸನ್ನನಾಥ ಸ್ವಾಮೀಜಿ 

By admin

ನಿಮ್ಮದೊಂದು ಉತ್ತರ

You missed

error: Content is protected !!