ಶಿವಮೊಗ್ಗ,ಸೆ.06:

ಅಂತೂ ಇಂತು ಕೊನೆಯ ಒಂದಿಷ್ಟು ದಿನ ಆದ್ರೂ ನಾವ್ ಮೇಯರ್ ಹಾಗೂ ಉಪಮೇಯರ್ ಆಗ್ತೀವೆ ಎಂದು ಸಖತ್ ಕುಶಿಯಾಗಿದ್ದ, ಶಿವಮೊಗ್ಗ ಮಹಾನಗರಪಾಲಿಕೆ ಕೌನ್ಸಿಲರ್ ಗಳಾದ ಜ್ಞಾನೇಶ್ವರ್ ಹಾಗೂ ಅನಿತಾ ರವಿಶಂಕರ್ ಅವರ ಆಸೆಗೆ ಕಲ್ಲು ಬಿದ್ದಿದೆ.

ಉಳಿದಿರುವ ಸುಮಾರು ಏಳೆಂಟು ತಿಂಗಳ ಮಟ್ಟಿಗಾದರೂ ಪಾಲಿಕೆಯಲ್ಲಿ ಕಿಂಗ್ ಗಳಂತೆ ಮೆರೆಯಬೇಕಾದ ಈ ಸದಸ್ಯರೇ ಮೇಯರ್ ಹಾಗೂ ಉಪಮೇಯರ್ ಆಗೋದು ಪಕ್ಕಾ ಎನ್ನಲಾಗುತ್ತಿತ್ತು. ಬರುವ ಹದಿಮೂರರಂದು ಹಬ್ಬದ ವಾತಾವರಣದಲ್ಲಿ ಉಳಿದ ಅವಧಿಯ ಸ್ಥಾನ ಪಡೆಯಬೇಕೆಂದಿದ್ದ ಕನಸು ಈಡೇರಲು ಹೈ ಕೋರ್ಟ್ ತಡೆ ಸಖತ್ ನಿರಾಸೆ ತಂದಿದೆ.

ಮೇಯರ್-ಉಪಮೇಯರ್ ಚುನಾವಣೆಗೆ ತಡೆ, ವೇಳಾಪಟ್ಟಿ ಹಿಂಪಡೆತ: ಕಾರಣ ನೋಡಿ
ಮಹತ್ವದ ಬೆಳವಣಿಗೆಯೊಂದರಲ್ಲಿ ಸೆ.13ರಂದು ನಿಗದಿಯಾಗಿದ್ದ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಗೆ ರಾಜ್ಯ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಹಿಂಪಡೆಯಲಾಗಿದೆ.
ಈ ಕುರಿತಂತೆ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ಸೂಚನೆ ಹೊರಡಿಸಿದ್ದು, ಸೆ.13ರಂದು ನಿಗದಿಯಾಗಿದ್ದ ಚುನಾವಣಾ ವೇಳಾಪಟ್ಟಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.

ಪಾಲಿಕೆಯ ಆಟೋಟ….., ನಿರೀಕ್ಣಣೆಗಳೇನಿದ್ದವು? ನೋಡಿ tungataranga.com


ರಾಜ್ಯ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಇಂದು ಸೂಚನೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿಯನ್ನು ಹಿಂಪಡೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!