ಶಿವಮೊಗ್ಗ, ಸೆ.೦೫:
ವೀರಭದ್ರ ವೀರನೂ ಹೌದು, ಭದ್ರನೂ ಹೌದು. ದುಷ್ಟರ ಪಾಲಿಗೆ ಶಿಕ್ಷಕನಾಗಿದ್ದಾನೆ. ಸಮಾಜದ ಮುಂದಿನ ಪೀಳಿಗೆಗೆ ಮೇಲ್ಪಂಕ್ತಿ ಹಾಕುವ ಸಲುವಾಗಿ ಯಡಿಯೂರಪ್ಪನವರು ಹಿರಿಯರೊಂದಿಗೆ ಚರ್ಚಿಸಿ ವೀರಭದ್ರ ಜಯಂತಿಗೆ ಕ್ರಮಕೈಗೊಂಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.


ಶಿವಮೊಗ್ಗ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಆಯೋ ಜಿಸಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಜಯಂತಿ ಮಾಡಲು ಸರ್ಕಾರ ಘೋಷಣೆ ಮಾಡುವಲ್ಲಿ ಪ್ರದೀಪ್ ಕಂಕನವಾಡಿಯವರ ಶ್ರಮ ಇದೆ. ಎಲ್ಲಾ ಸಮುದಾಯದವರು ವೀರಭದ್ರನ ಆರಾಧನೆ ಮಾಡುತ್ತಾರೆಂಬ ಕಾರಣಕ್ಕೆ ಆಚರಿಸಲಾಗುತ್ತದೆ.

ಮಂಗಳವಾರ ವೀರಭದ್ರ ಹುಟ್ಟಿದ ದಿನವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ವೀರಶೈವ ಸಮಾಜ ವೀರಭದ್ರನ ತರವೇ ಇರಬೇಕು. ಶಿವನ ಕೋಪದಿಂದ ಉದ್ಭವಿಸಿದ ವೀರಭದ್ರ. ಅಪಮಾನಕಾರಿ ಸಂಗತಿಗಳಾದಾಗ ದಂಡಿಸುವ ಕೆಲಸ ಮಾಡಿದ್ದಾನೆ. ವೀರಶೈವ ಲಿಂಗಾಯತ ಎಂದು ಒಡೆಯುವ ಕೆಲಸವೂ ನಡೆದಿತ್ತು. ನಾವ್ಯಾರು ಎಂಬ ಅನುಮಾನವೂ ಆರಂಭವಾಗಿತ್ತು. ನಮ್ಮ ಸಂಪ್ರದಾಯ, ಆಚರಣೆ, ಸಂಸ್ಕೃತಿಯನ್ನು ಹೇಳಿಕೊಡ ಬೇಕಿದೆ. ಹುಟ್ಟಿನಿಂದ ವೀರಶೈವರಾಗುತ್ತಿದ್ದೇ ವೆಯೇ ಹೊರತೂ ಆಚರಣೆಯನ್ನು ಬಿಡುತ್ತಿ ದ್ದೇವೆ. ಇದು ಆಗಬಾರದು ಎಂದರು.


ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ಯಾವ ಆಚರಣೆಗಳು ಸಮಾಜಕ್ಕೆ ಬೇಕಾಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯಿತರು ಬೆಳೆಯಬೇಕು. ಅಭಿವೃದ್ಧಿ ಪಥವನ್ನು ಕಾಣ ಬೇಕು. ಆಜಾದಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ವೀರಭದ್ರೇಶ್ವರ ಅಮರ ಎಂದು ತಿಳಿದು ನಮ್ಮ ಸಮಾಜ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಬೇಕಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶೇ. ೧೦೦ ರಷ್ಟು ಜನ ಉನ್ನತ ಶಿಕ್ಷಣ ಪಡೆಯುತ್ತಾರೆ. ಹಾಗಾಗಿ ಅಲ್ಲಿ ಬಡತನ ದಾರಿದ್ರ್ಯವಿಲ್ಲ. ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ. ೨೬ ರಷ್ಟು ಮಾತ್ರ. ಹಾಗಾಗಿ ನಾವು ಬಡತನ ಅನುಭವಿಸುತ್ತಿದ್ದೇವೆ. ನಮ್ಮ ಸಮಾಜದ ಆಚರಣೆಗಳನ್ನು ಬಿಡದೇ ಸಮಾಜದ ಎಲ್ಲಾ ಬಂಧುಗಳು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು ಎಂದರು.


ವೀರೇಶ್ ಬಾಬು ವಿಶೇಷ ಉಪನ್ಯಾಸ ನೀಡಿ, ವೀರಭದ್ರನಲ್ಲಿಯೂ ಶಿವ ಶಕ್ತಿ ಇದೆ. ಭದ್ರಕಾಳಿ ಸ್ವರೂಪನಾಗಿ ಉದ್ಭವಾದವನು ವೀರಭದ್ರ. ವೀರಶೈವ ಧರ್ಮದ ಸಾರವನ್ನು ಜಗತ್ತಿಗೆ ಸಾರಿದವನು ವೀರಭದ್ರ. ವೀರಭದ್ರರ ಅವತಾರ ಭಾರತದ ಅಖಂಡತೆಯನ್ನು ಸಾರುತ್ತದೆ. ಬೇರೆ ಬೇರೆ ರೂಪದಲ್ಲಿ ಜನ್ಮ ತಾಳಿ ಲೋಕ ಕಲ್ಯಾಣ ಮಾಡಿದ್ದಾರೆ ಎಂದರು.


ರಂಭಾಪುರಿ ಪೀಠದ ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಮಹಾಸ್ವಾಮೀಜಿ, ಮಳಲಿ ಮಠದ ಶ್ರೀ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.


ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ, ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್ ಗೌಡ್ರು, ಎಸ್.ಎಸ್. ಜ್ಯೋತಿ ಪ್ರಕಾಶ್, ಎನ್.ಜೆ. ರಾಜಶೇಖರ್, ಎಸ್.ಪಿ. ದಿನೇಶ್, ಅನಿತಾ ರವಿಶಂಕರ್, ಡಾ. ಧನಂಜಯ ಸರ್ಜಿ, ಇ.ವಿಶ್ವಾಸ್, ರುದ್ರಮುನಿ ಸಜ್ಜನ್, ಈರೇಶ್ ಗೌಡ್ರು, ಟಿ.ವಿ. ವೀರಯ್ಯ, ಬಳ್ಳೆಕೆರೆ ಸಂತೋಷ್, ಎಸ್.ಎನ್. ಚನ್ನಬಸಪ್ಪ, ಧನರಾಜ್ ಬಿ.ಜಿ., ಡಿ.ಹೆಚ್. ಡಾ. ರಾಜೇಶ್ ಸುರಗಿಹಳ್ಳಿ, ಹೆಚ್.ವಿ. ಮಹೇಶ್ವರಪ್ಪ, ಬಿಂದುಕುಮಾರ್, ಎನ್.ಜೆ. ನಾಗರಾಜ್, ರೇಖಾ, ಹೆಚ್.ಸಿ. ಯೋಗೀಶ್ ಮತ್ತಿತರರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!