ಶಿವಮೊಗ್ಗ,
ನಗರದ ಪ್ರತಿಷ್ಠಿತ ಶ್ರಿ.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಶರಾವತಿ ನಗರದ ಶ್ರೀ.ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿರುವ ಅವಳಿ ಸಹೋದರಿಯರಾದ ಗೌತಮಿಗೌಡ, ಗೌರಂಗಿಗೌಡ ಹಾಗೂ ೮ನೇ ತರಗತಿಯಲ್ಲಿ ಓದುತ್ತಿರುವ ನಿತಿನ್ಸಿಂಗ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ

ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಅಮೆಚೂರ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿ. ೧೪ ವರ್ಷ ವಯೋಮಿತಿ ಒಳಗಿನ ವಿಭಾಗದ ಉದ್ದ ಜಿಗಿತದಲ್ಲಿ ನಿತಿನ್ಸಿಂಗ್ ೫.೫೭ಮೀಟರ್ಸ್ ಜಿಗಿದು ಬಂಗಾರದ ಪದಕ ಪಡೆದುಕೊಂಡಿರುತ್ತಾನೆ. ಗುರು ಸಿಂಗ್ ಮತ್ತು ಮಂಜುಳಾ ದಂಪತಿಗಳ ಪುತ್ರನಾಗಿರುತ್ತಾನೆ.

೧೬ ವರ್ಷದ ವಯೋಮಿತಿ ಒಳಗಿನ ವಿಭಾಗದಲ್ಲಿ ಗೌತಮಿ ಗೌಡ ಎತ್ತರ ಜಿಗಿತದಲ್ಲಿ ಭಾಗವಹಿಸಿ ೧.೬೫ಮೀಟರ್ಸ್ ಜಿಗಿದು ಬಂಗಾರದ ಪದಕ ಪಡೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಗೌರಂಗಿ ಗೌಡ ೮೦ಮೀಟರ್ಸ್ ಹರ್ಡಲ್ಸ್ನಲ್ಲಿ ಭಾಗವಹಿಸಿ ಬೆಳ್ಳಿ ಪದ ಪಡೆದುಕೊಂಡಿದ್ದಾರೆ.
ಈ ಅವಳಿ ಸಹೋದರಿಯರು ನಗರದ ಕೆ.ಯು.ವಿಷ್ಣುವರ್ಧನ ಮತ್ತು ಸುಷ್ಮಾ ಇವರ ದಂಪತಿಗಳ ಪುತ್ರಿಯಾಗಿರತ್ತಾರೆ.

ಈ ಪ್ರತಿಭಾವಂತ ಕ್ರೀಡಾಪಟುಗಳು ಸೆ.೦೯ರಿಂದ ೧೧ರವರೆಗೆ ಆಂದ್ರಪ್ರದೇಶದ ಗುಂಟೂರಿನಲ್ಲಿ ನಡೆಯಲಿರುವ ಸೌತ್ಜೋನ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಲಿದ್ದಾರೆ.

ಕ್ರೀಡೆಯ ಜೊತೆಗೆ ಓದಿನಲ್ಲೂ ಮುಂದಿದ್ದು, ಈ ಕ್ರೀಡಾಪ್ರತಿಭೆಗಳ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ.ಶ್ರೀ.ಪ್ರಸನ್ನನಾಥ ಸ್ವಾಮೀಜಿಯವರು, ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಂಶುಪಾಲರಾದ ಹೇಮಾ ಎಸ್.ಆರ್., ಅಧ್ಯಾಪಕವೃಂದ, ಸಿಬ್ಬಂಧಿವರ್ಗ ಶುಭಹಾರೈಸಿದ್ದಾರೆ.