ಸಾಂದರ್ಭಿಕ ಚಿತ್ರ
ಶಿವಮೊಗ್ಗ,ಆ.30:
ಶಿವಮೊಗ್ಗ ಹೊರವಲಯ ಹಾಗೂ ಹೊನ್ನಾಳಿ, ನ್ಯಾಮತಿ ಮೂಲದಲ್ಲಿ ಕಾಣಿಸಿಕೊಂಡು ಆತಂಕ ಹುಟ್ಟಿಸಿದ್ದ ಚಿರತೆ ಹಾವಳಿ ಭದ್ರಾವತಿ ತಾಲೂಕು, ಹೊಳೆಹೊನ್ನೂರು ಸಮೀಪದ ಅರಹತೊಳಲು ಕೈಮರದ ಬಳಿ ಕಾಣಿಸಿಕೊಂಡಿದೆ ಇಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೈಮರದಿಂದ ಎಡೇಹಳ್ಳಿಗೆ ಹೋಗುವ ಮಾರ್ಗದಲ್ಲಿ ಈ ಚಿರತೆಯು ಚಿರತೆಯ ಚಹರೆಯ ಪ್ರಾಣಿ ಎಂದು ಕಾಣಿಸಿಕೊಂಡಿದೆ ಎಂದು ಸ್ಥಳೀಯ ತೋಟದಲ್ಲಿ ಕೆಲಸ ಮಾಡುವ ರೈತರು ಆತಂಕದಿಂದ ಹೇಳಿದ್ದಾರೆ. ಭಯದಿಂದ ಪೋಟೋ ಸಹ ತಗೆಯಲು ಹೋಗದಿರುವುದು ಒಳ್ಳೆಯ ವಿಚಾರವೇ ಹೌದು.
ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಾ ಜನರನ್ನು ಆತಂಕಕ್ಕೆ ದೊಡುತ್ತಿರುವುದು ನೋವಿನ ಸಂಗತಿ ಆದರೂ ಸಹ ಕಾಡುಪ್ರಾಣಿಗಳಿಗೆ ವಾಸಿಸಲು, ಬದುಕಲು ಅವಕಾಶ ನೀಡದಿರುವಂತಹ ಮನುಕುಲದ ವಾತಾವರಣವೇ ಇಂತಹ ಅವಘಡಗಳಿಗೆ ಕಾರಣ ಎನ್ನಲಾಗಿದೆ.
ಸ್ಥಳೀಯ ಕೈಮರ ಮೂಲದ ಜನರ ಹೇಳಿಕೆ ಪ್ರಕಾರ ಈ ಚಿರತೆಯು ದೊಡ್ಡದಾಗಿದ್ದು ಗಾಬರಿ ಹುಟ್ಟಿಸುವಂತಿದೆ ಎಂದು ಹೇಳಲಾಗುತ್ತದೆ. ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಸ್ಪಷ್ಟ ನಿಲುವುಗಳು ದೊರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಅತ್ಯಂತ ಎಚ್ಚರಿಕೆಯಿಂದ ತಮ್ಮ ರೈತಾಪಿ ಕೆಲಸವನ್ನು ಮಾಡಬೇಕಾಗಿದೆ.
ಮೊನ್ನೆಯಷ್ಟೇ ನ್ಯಾಮತಿ ಬಳಿ ಚಿರತೆಯು ಜಮೀನು ಕೆಲಸಕ್ಕೆ ಹೋಗಿದ್ದ ಮಹಿಳೆಯ ಮೇಲೆ ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿತ್ತು.