ಗಣೇಶ ಆಚರಣೆ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಇಬ್ಬರು ರೌಡಶೀಟರ್ ಗಳನ್ನ ಶಿವಮೊಗ್ಗ ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗಿದೆ. ಶಮಂತ @ ಶಮಂತ ನಾಯ್ಕ(28) ಹಾಗೂ ಆಶ್ರಯ ಬಡಾವಣೆಯ ಸಂದೀಪ @ ಸಂದೀಪ್ ಕುಮಾರ್‌(29) ಇಬ್ವರನ್ನೂ ಒಂದು ತಿಂಗಳ ವರೆಗೆ ಗಡಿಪಾರು ಮಾಡಲಾಗಿದೆ.


ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗತರುವಂತಹ ಕೃತ್ಯಗಳನ್ನೆಸಗಿ, ಸಾರ್ವಜನಿಕವಾಗಿ ಗೂಂಡಾವರ್ತನೆಯನ್ನು ಪ್ರದರ್ಶಸುತ್ತಾ, ಸಾರ್ವಜನಿಕರಲ್ಲಿ ಭಯವನ್ನುಟ್ಟಿಸುತ್ತಿದ್ದ ಈ ಇಬ್ಬರಿಗೂ ರೌಡಿ ಶೀಟರ್ ತೆರೆದು ಗಡಿ ಪಾರು ಮಾಡಲಾಗಿದೆ.


ಶಮಂತ @ ಶಮಂತ ನಾಯ್ಕ ಈತನ ವಿರುದ್ಧ ಒಟ್ಟು 15 ಪ್ರಕರಣಗಳು ಮತ್ತು ಸಂದೀಪ @ ಸಂದೀಪ್ ಕುಮಾರ್‌ ಈತನ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿದೆ. ಇಬ್ಬರ ಮೇಲೂ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಇವರುಗಳು ಮುಂಬರುವ ಗಣಪತಿ ಹಬ್ಬದ ಸಮಯದಲ್ಲಿಯೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರಬಹುದು ಎಂಬ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಉಪ ವಿಭಾಗಾಧಿಕಾರಿಗಳು ಗಡಿಪಾರಿಗೆ ಆದೇಶಿಸಿದ್ದಾರೆ.
ಶಮಂತ ಮತ್ತು ಸಂದೀಪ ರವರುಗಳನ್ನು ಗಡಿಪಾರು ಮಾಡುವಂತೆ ಪೊಲೀಸ್‌ ಉಪಾಧೀಕ್ಷಕರು ನೀಡಿದ ವರದಿಯ ಮೇರೆಗೆ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು, ಶಿವಮೊಗ್ಗ ಉಪ ವಿಭಾಗ ರವರು ಈ ಇಬ್ಬರೂ ವ್ಯಕ್ತಿಗಳನ್ನ ದಿನಾಂಕಃ-25-08-2022 ರಿಂದ ದಿನಾಂಕಃ-25-09-2022 ರ ವರೆಗೆ ಶಿವಮೊಗ್ಗ ಉಪ ವಿಭಾಗ ಸರಹದ್ದಿನಿಂದ ಗಡಿಪಾರು ಮಾಡಿ ಆದೇಶಿಸಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!