ಶಿವಮೊಗ್ಗ,
ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆ ಹಾಗೂ ಅವೈಜ್ಞಾನಿ ಕವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಇದು ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆಗಳ ಒಕ್ಕೂ ಟದ ವತಿಯಿಂದ ವಿನೋಬನಗರ ಪೊಲೀಸ್ ಚೌಕಿ ಸಮೀಪ ಪ್ರತಿಭಟನೆ ನಡೆಸಲಾಯಿತು.


೧೦೦ ಅಡಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ ವಾಗಿವೆ. ಅಸಂಬದ್ಧವಾಗಿ ಡ್ರೈನೇಜ್ ಸ್ಲಾಬ್ ಜೋಡಣೆ ಮಾಡಲಾಗಿದೆ. ಹತ್ತಾರು ಕಡೆ ಗುಂಡಿ ಬಿದ್ದ ಪುಟ್ ಪಾತ್‌ಗಳು ಕಂಡುಬರುತ್ತಿದೆ. ಅವೈಜ್ಞಾನಿಕ ಗ್ರಿಟ್ ಚೇಂಬರ್ ಅಳವಡಿಕೆಯಿಂದ ಚರಂಡಿಗೆ ನೀರು ಹರಿ ಯುತ್ತಿಲ್ಲ. ಸಂಪೂರ್ಣ ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.


ಕನಿಷ್ಠ ೧೫ ವರ್ಷ ಬಾಳಿಕೆ ಬರಬೇಕಾದ ರಸ್ತೆಯಲ್ಲಿ ಎರಡೇ ತಿಂಗಳಲ್ಲಿ ಗುಂಡಿ ಬಿದ್ದಿವೆ. ಇನ್ನು ೧-೨ ವರ್ಷದಲ್ಲಿ ಸಂಪೂರ್ಣ ನಾಶವಾಗಿ ಸಾರ್ವಜನಿಕರು ರಸ್ತೆಯಲ್ಲಿ ಸಾಗುವುದಕ್ಕೆ ದುಸ್ತರವಾಗಲಿದೆ. ಕಳಪೆ

ಕಾಮಗಾರಿಯಿಂದಾಗಿ ಕೋಟ್ಯಾಂತರ ರೂ. ಮೌಲ್ಯದ ರಾಷ್ಟ್ರೀಯ ಸಂಪತ್ತುಗಳಾದ ಮರಳು, ಚೆಲ್ಲಿ, ಟಾರು ನಷ್ಟವಾಗಿದೆ. ಪರೋಕ್ಷವಾಗಿ ನಾಡಿನ ಪರಿಸರಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈಜ್ಞಾನಿಕ ಹಾಗೂ ಕಳೆದ ಕಾಮಗಾರಿಯಿಂದ ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ನಷ್ಟವಾಗಿದೆ. ಕಳಪೆ ಕಾಮಗಾರಿಗೆ ಕಾರಣಕರ್ತರಾಗಿರುವ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಠಾರೆ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರನ್ನು ಶಿಕ್ಷಿಸಿ, ಇಲ್ಲವೇ ಕಾಮಗಾರಿಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು, ಶಾಸಕರು ಸಂಸದರೇ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತಕುಮಾರ್, ಡಾ. ಸತೀಶ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!