ಶಿವಮೊಗ್ಗ ,ಆ.21:
ಇಲ್ಲಿನ ಸಿಟಿ ಸೆಂಟರ್ ನಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ಅಳವಡಿಸಿರುವುದಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಕನ್ನಡ ಜನಪರ ವೇದಿಕೆಯ ಎಂಡಿ ಷರೀಫ್ ಅಲಿಯಾಸ್ ಆಸೀಫ್ ಅವರಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ನೀಡಿದೆ.
ಆ.14 ರಂದು ಸಿಟಿ ಮಾಲ್ ನಲ್ಲಿ ವೀರ ಸಾವರ್ಕರ್ ಪೋಟೊವನ್ನ ಅಳವಡಿಸಿದ ವಿಚಾರದಲ್ಲಿ ಆಸೀಫ್ ಆಕ್ಷೇಪವೆತ್ತಿದ್ದರು. ಈ ಆಕ್ಷೇಪಣೆಯನ್ನ ಪಾಲಿಕೆಯ ಉಪ ಆಯುಕ್ತರ ಕರ್ತವ್ಯಕ್ಕೆ ಅಡ್ಡಿಸಲಾಗಿದೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು.
ಆವರಿಗೆ ಆ. 26 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ಮೂರು ಬಾರಿ ಅವರ ಜಾಮೀನು ವಿಚಾರಣೆ ಮುಂದೂಡಲಾಗಿತ್ತು. ಆದರೆ ಅವರ ಅರ್ಜಿ ವಿಚಾರಣೆಯನ್ನ ಪುರಸ್ಕರಿಸಿದ ಎರಡನೇ ಜೆಎಂಎಫ್ ಸಿ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
50 ಸಾವಿರ ಬಾಂಡನ್ನ ನ್ಯಾಯಾಲಯಕ್ಕೆ ಹಾಜರಿ ಪಡಿಸಬೇಕು, ಸಾಕ್ಷಿ ನಾಶ ಮಾಡಬಾರದು, ಠಾಣೆ ವಿಚಾರದ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕು. ನ್ಯಾಯಾಲಯಕ್ಕೆ ದಿನ ಹಾಜರಾಗಬೇಕು. ಎಂಬ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ.

