ಶಿವಮೊಗ್ಗ,
ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಬಡವರ ಮಕ್ಕಳೇ ಏಕೆ ಹತ್ಯೆಯಾಗುತ್ತಿದ್ದಾರೆ? ರಾಜಕಾರಣಿಗಳ ಮಕ್ಕಳು ಏಕೆ ಸುರಕ್ಷಿತರಾಗಿರುತ್ತಾರೆ ಎಂದು ಜನರೇ ಯೋಚಿಸಬೇಕಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು..
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ಸಂಪೂರ್ಣ ವಿಫಲವಾಗಿದೆ. ಅಸಹ್ಯಕರವಾದ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಹಪಾಹಪಿತನ ಮಾಡುತ್ತಿದ್ದಾರೆ. ಹತ್ಯೆಯಂತಹ ಘಟನೆಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಧರ್ಮವನ್ನು ಮುಂದೆ ತಂದು ದ್ವೇಷ ಬೆಳೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಅರಾಜಕತೆಯೇ ಉಂಟಾಗುತ್ತಿದೆ. ಇಂತಹ ನೀಚತನದ ರಾಜಕೀಯ ಸ್ವಾತಂತ್ರ್ಯದ ಇತಿಹಾಸದಲ್ಲಿ ಎಂದೂ ಕಂಡುಬಂದಿರಲಿಲ್ಲ ಎಂದರು.
ಕೆ.ಎಸ್. ಈಶ್ವರಪ್ಪ ಅವರಿಗೆ ಸಿದ್ಧರಾಮಯ್ಯ ಅವರನ್ನು ಬೈಯುವುದು ಬಿಟ್ಟರೆ ಬೇರೆನೂ ಕೆಲಸವೇ ಇಲ್ಲ. ಅವರ ಪಕ್ಷದ ಮುಖಂಡರು ಅದಕ್ಕಾಗಿಯೇ ಅವರನ್ನು ಏಜೆಂಟರಂತೆ ನೇಮಿಸಿದ್ದಾರೆ. ಸಿದ್ಧರಾಮಯ್ಯ ಆರ್.ಎಸ್.ಎಸ್. ಕಾರ್ಯಕರ್ತನ ಧೂಳಿಗೂ ಸಮ ಅಲ್ಲ ಎಂದು ಈಶ್ವರಪ್ಪ ಟೀಕಿಸಿದ್ದಾರೆ. ಈ ಆರ್.ಎಸ್. ಎಸ್. ಏನು? ಅವರಿಂದ ಈ ದೇಶಕ್ಕೆ ಏನು ಒಳ್ಳೆಯದಾ ಗಿದೆ? ಅವರೇನು ತ್ಯಾಗ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಈಶ್ವರಪ್ಪ ಎ ೧ ಆರೋಪಿಯಾಗಿದ್ದರು. ಪ್ರಭಾವ ಬೆಳೆಸಿ ಬಿ ರಿಪೋರ್ಟ್ ಮಾಡಿಸಿಕೊಂಡಿದ್ದಾರೆ. ಅವರು ಕಾನೂನಿನಿಂದ ಬಚಾವಾಗಬಹುದು. ಆದರೆ, ಸಂತೋಷ್ ಪಾಟೀಲ್ ಕುಟುಂಬದ ಶಾಪದಿಂದ ಬಚಾ ವಾಗಲು ಸಾದ್ಯವಿಲ್ಲ. ಅವರಿಗೆ ಈಗಲೂ ಸಮಯವಿದೆ. ಸಂತೋಷ್ ಪಾಟೀಲ್ ಅವರ ಮನೆಗೆ ಹೋಗಿ ಕೈಮುಗಿದು ಅವರಿಗೆ ಕೊಡುವ ದುಡ್ಡು ಕೊಡಿಸಿ ಬರಲಿ. ಹೋಮ ಬಿಟ್ಟು ಅವರ ಹೋಮ್ ಗೆ ಹೋಗಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೇಖಾ ರಂಗನಾಥ್, ಯಮುನಾ ರಂಗೇಗೌಡ, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್ ಮತ್ತಿತರರಿದ್ದರು.