ಗಜೇಂದ್ರ ಸ್ವಾಮಿ
ಶಿವಮೊಗ್ಗ, ಆ.28:
ಸ್ವಲ್ಪವೇ ಸ್ವಲ್ಪ ದಟ್ಟ ಕಾಡಿನೊಳಗೆ ಇರುವ ಕಾಡುಪ್ರಾಣಿಗಳನ್ನು ಕೇವಲ ಕ್ಷುಲ್ಲಕ ಆಸೆಗೆ ಬಲೆ ಬೀಸಿ ಸಾಯಿಸುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ.
ಇಲ್ಲಿ ಹುಲಿ ಉಗುರು ಸಂಗ್ರಹದ ಮೂಲಕ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಾಗರ ತಾ. ಆನಂದಪುರಂ ವ್ಯಾಪ್ತಿಯಲ್ಲಿ ನಿರಂತರವಾಗಿ ಈ ಕೃತ್ಯ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ. ಸಾಗರ ತಾಲೂಕು ಆನಂದಪುರಂ ಬಳಿಯ ದಟ್ಟ ಕಾಡು ಹೊಂದಿರುವ ಕಾಳುಸರು, ಹಿರೇಹಡ್ಕ, ಕಣ್ಣೂರು, ಗೌತಮಪುರ, ಮಚ್ಚೂರು, ಕೆಂಚಾಳಸರ ಸೇರಿದಂತೆ ಹಲವು ಭಾಗದಲ್ಲಿ ಕಾಡು ಪ್ರಾಣಿಗಳನ್ನು ನಿರ್ಭಯವಾಗಿ ಸಾಯಿಸುತ್ತಿರುವ ಸಂಗತಿ ನಿರಂತರವಾಗಿ ನಡೆಯುತ್ತಿದ್ದರೂ ಇರುವ ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ನೆನ್ನೆ ರಾತ್ರಿ ದಾವಣಗೆರೆಯಿಂದ ಐಜಿಪಿ ತಂಡ ಗುಪ್ತ ಮೂಲಗಳ ಮಾಹಿತಿ ಅನುಸಾರ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದಪುರಂ ಬಳಿ ಮೂವರನ್ನು ಬಂಧಿಸಿ ಅವರ ಬಳಿ ಸುಮಾರು 2 ಲಕ್ಷ ರೂ ಮೌಲ್ಯದ ಹುಲಿಗಳನ್ನು ಉಗುರುಗಳನ್ನು ಪಡಿಸಿಕೊಂಡಿದೆ.
ಕೆಂಚಾಳಸರದ ಮೋಹನ, ವಿಶ್ವನಾಥ ಹಾಗೂ ಮತ್ತೊರ್ವನನ್ನು ಬಂಧಿಸಿ ಅವರಿಂದ ಆರು ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಉಗುರುಗಳನ್ನು ಇವರು ಅತ್ಯಂತ ಚಿಲ್ಲರೆ ಹಣಕ್ಲೆ ಮಾರಿದ್ದಾರೆನ್ನಲಾಗಿದೆ.

ಮೊದಲ ಆರೋಪಿ ಮೋಹನ


ಶಿವಮೊಗ್ಗ ಜಿಲ್ಲೆಯ ದಟ್ಟಕಾಡು ಹೊಂದಿರುವ ಈ ಭಾಗದ ಕೆಲ ಕಿಡಿಗೇಡಿ ವಿಕೃತ ಮನಸುಗಳು ಕಾಡಿನ ಮಧ್ಯದಲ್ಲಿ ಬಲೆ ಹಾಕಿ ನಂತರ ಸತ್ತು ಬಿದ್ದಿರುವ ಪ್ರಾಣಿಗಳ ಉಗುರು ಕಿತ್ತುಕೊಂಡು ಬರುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ನಾಲ್ಕೈದು ಬಾರಿ ಸೂಕ್ತ ಹುಡುಕಾಟ ನಡೆಸಿ ನಡೆಸಿದ್ದರು. ಆದರೆ ಆರೋಪಿಗಳ ಪತ್ತೆಯಾಗಿರಲಿಲ್ಲ.
ಕಾಡನ್ನು ಹಾಗೂ ಅಲ್ಲಿನ ಪ್ರಾಣಿಗಳನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆ ಇದು ತಪ್ಪೆಂದು ಬಾಯಿಬಿಟ್ಟಿಲ್ಲ. ಕರ್ಮಕ್ಕೆ ಸುಳಿವಿನ ಮಾಹಿತಿಗಳು ದಕ್ಕಿದ್ದರೂ ಕ್ರಮ ಕೈಗೊಳ್ಳದಿರುವುದು, ಹುಡುಕಾಟ ನಡೆಸದಿರುವುದು ಇಂದಿನ ದಾಳಿಯ ಮೂಲಕ ಪತ್ತೆಯಾಗಿದೆ. ಒಂದಕ್ಕೆ ಕೇವಲ ಸಾವಿರ ರೂಪಾಯಿಗೆ ಹುಲಿ ಉಗುರುಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಚಿಲ್ಲರೆ ವ್ಯವಹಾರಕ್ಕೆ ನಮ್ಮ ಅಮೂಲ್ಯ ಪ್ರಾಣಿಯನ್ನು ಸಾಯಿಸುವ ಮಟ್ಟಕ್ಕೆ ಕಿಡಿಗೇಡಿಗಳ ಮನೋಸ್ಥಿತಿ ಬೆಳೆದಿದೆ ಎಂದರೆ ನಮ್ಮ ವ್ಯವಸ್ಥೆ ಬಗ್ಗೆ ನಾವೇ ನಾಚಿಕೆ ಪಡಬೇಕಾಗಿದೆ.
ಇತ್ತೀಚೆಗಷ್ಟೇ ಇದೇ ಭಾಗದಲ್ಲಿ ಚಿರತೆಯೊಂದು ಸಾವು ಕಂಡಿತ್ತು ಅಂದೂ ಸಹ ಪೊಲೀಸರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದರು. ಕಿವಿ ಕೇಳದಂತೆ ವರ್ತಿಸಿದ್ದ ಅರಣ್ಯ ಇಲಾಖೆ ಈಗ ದಾಳಿಯಿಂದ ಮತ್ತೊಮ್ಮೆ ಆರೋಪ ಹೊತ್ತುಕೊಳ್ಳುವ ತವಕದಲ್ಲಿ ಇರುವಂತೆ ಕಾಣುತ್ತದೆ.
ಇರುವ ಕನಿಷ್ಠ ಕಾಡುಪ್ರಾಣಿಗಳನ್ನು ಉಳಿಸುವ ನಿಟ್ಟಿನಲ್ಲಿ ಆ ಭಾಗದ ಜನರನ್ನು ಅದರಲ್ಲೂ ಕಿಡಿಗೇಡಿಗಳನ್ನು ಹುಡುಕಿ ಕಾನೂನಾತ್ಮಕ ಕ್ರಮಕೈಗೊಳ್ಳುವ ಅಗತ್ಯವಿದೆ. ನಿನ್ನೆ ನಡೆದ ದಾಳಿಯಲ್ಲಿ ಐಜಿಪಿ ಅವರ ತಂಡವು ಇನ್ಸ್ ಪೆಕ್ಟರ್ರ್ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿತ್ತು. ಇನ್ನು ಈ ಸಂಬಂಧ ದೂರು ದಾಖಲಾಗುವ ಹಿನ್ನೆಲೆಯಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.

By admin

ನಿಮ್ಮದೊಂದು ಉತ್ತರ

error: Content is protected !!