ಶಿವಮೊಗ್ಗ: ಸಂಸ್ಕೃತ ಭಾಷೆಗೆ ಜಾತಿಯ ಹಣೆಪಟ್ಟಿ ಕಟ್ಟಬೇಡಿ ಸಂಸ್ಕೃತ ಎಲ್ಲರ ಭಾಷೆ ಎಂದು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ನಗರದ ಶಾಸಕರಾಗಿರುವ ಕೆ.ಎಸ್. ಈಶ್ವರಪ್ಪನವರು ತಿಳಿಸಿದರು.

ಅವರು ಶಿವಮೊಗ್ಗ ನಗರದ ಕಸ್ತೂರ್ಬಾ  ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಪ್ರಾಧ್ಯಾಪಕ ಸಂಘ ಬೆಂಗಳೂರು, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಹಾಗೂ ಶಿವಮೊಗ್ಗ ಜಿಲ್ಲಾ ಘಟಕ ವತಿಯಿಂದ ಸಂಸ್ಕೃತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ತಿಳಿಸಿದರು.


ಸಂಸ್ಕೃತ ಭಾಷೆ ಇದು ಸನಾತನವಾದ ಭಾಷೆ, ದೈವ ಭಾಷೆ, ಸಂಸ್ಕೃತವನ್ನು ಕಲಿಯುವುದರಿಂದ ನಾವು ಇತರ ಎಲ್ಲಾ ಭಾಷೆಗಳನ್ನು ಕಲಿಯಲು ಸುಲಭವಾಗುತ್ತದೆ.  ಸಂಸ್ಕೃತ ವೈಜ್ಞಾನಿಕ ಭಾಷೆ ಇದನ್ನು ಎಲ್ಲರೂ ಕಲಿಯಲೇಬೇಕು ಇದಕ್ಕೆ ಯಾವುದೇ ಜಾತಿಯಾಗಲಿ ಮತ-ಪಂಥವಾಗಲಿ ಇರುವುದಿಲ್ಲ,   ಮಕ್ಕಳಿಗೆ ಸಂಸ್ಕೃತವನ್ನು ಬಾಲ್ಯದಿಂದಲೇ ಕಲಿಸಿದರೆ ಮಕ್ಕಳಲ್ಲಿ ಜ್ಞಾನಾರ್ಜನೆ ಶಕ್ತಿ ವೃದ್ಧಿಸುತ್ತದೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಒಂದು ಕಾಲದಲ್ಲಿ ಸಂಸ್ಕೃತವನ್ನು ಕಲಿಯುವುದು ಬಹಳ ಕಷ್ಟ ಎಂದು ಪರಿಗಣಿಸಿದ್ದರು ಆದರೆ ಇಂದು  ಸಂಸ್ಕೃತ  ಕಲಿಸುವ ವ್ಯವಸ್ಥೆ ಎಲ್ಲಡೆ ಇರುತ್ತದೆ.   ಸಂಸ್ಕೃತವನ್ನು ಸುಲಭವಾಗಿ ಎಲ್ಲರಿಗೂ ಕಲುಸುವ ವ್ಯವಸ್ಥೆಯನ್ನು ಸಂಸ್ಕೃತ ಭಾರತೀಯರು ಮಾಡಿರುವುದು ಶ್ಲಾಘನೀಯ ಎಂದರು. 
ಮುಂದಿನ ದಿನಗಳಲ್ಲಿ ಬಾರತಕ್ಕೆ ಇಡೀ ವಿಶ್ವವೇ ಹೊಗಳಿ ಭಾರತವನ್ನು ವಿಶ್ವದ ಗುರುವನ್ನಾಗಿ ಒಪ್ಪಿಕೊಳ್ಳುವ ಸಂದರ್ಭ ಸಂಸ್ಕೃತ ಭಾಷೆಯಿಂದ ಲಭಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ  ಪ್ರೌಢಶಾಲಾ ಸಂಸ್ಕೃತ ಶಿಕ್ಷಕ ರಾಜ್ಯ ಸಂಘದ ಅಧಕ್ಷ ನಾರಾಯಣ ಬಟ್ಟರು ನೀಡಿದ ಮನವಿಯನ್ನು ಸ್ವೀಕರಿಸಿ ಸಂಸ್ಕೃತ ವಿದ್ಯಾರ್ಥಿಗಳಿಗೂ ಕಲಿಸುವಂತಹ ಗುರುಗಳಿಗೂ ಅನ್ಯಾಯ ಅಗಬಾರದು, ಸದ್ಯದಲ್ಲಿಯೇ ನಾನು ಈ ಸಂಘದ ಪದಾಧಿಕಾರಿಗಳ ಜೊತೆ ಶಿಕ್ಷಣ ಮಂತ್ರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘದ ಕಾರ್ಯದರ್ಶಿ ಸುಮಂಗಲ ಹೆಗಡೆ, ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹ ಮೂರ್ತಿ, ಶಾಲಾಸು ಸಂಸ್ಕೃತ ಯೋಜನೆಯ ರಾಜ್ಯಾಧ್ಯಕ್ಷ ಎಸ್.ಕೆ.ಶೇಷಾಚಲ, ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆಶ್ವಥ್ಥ ನಾರಾಯಣ ಶೆಟ್ಟಿ, ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತಗಣ ಸದಸ್ಯ ಮತ್ತೂರು ಶ್ರೀನಿಧಿ,  ವಿಪ್ರಯುವ ಪರಿಷತ್ ಕಾರ್ಯದರ್ಶಿ ಸಂತೋಷ್ ಭಾರದ್ವಾಜ್‌, ಉಪಸ್ಥಿತರಿದ್ದರು.    
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯಿಂದ ೧೫೦ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು.
ನಾಗೇಶ ಗುಮ್ಮಾನಿ ಸ್ವಾಗತಿಸಿದರು. ಕುಮಾರಸ್ವಾಮಿವಂದಿಸಿದರುವರಲಕ್ಷ್ಮೀ ನಿರೂಪಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!