ಸಾಗರ, ಜು.೨೨:
ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವರದಹಳ್ಳಿಯ ಕೃಷಿಕ ಮಂಜುನಾಥ ಶೆಟ್ಟಿ (೫೨) ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ನಡೆದಿದೆ.
ವರದಪುರದ ಶ್ರೀಧರಾಶ್ರಮದ ಸಮೀಪ ಕಿರಾಣಿ, ಪೂಜಾ ವಸ್ತುಗಳ ಮಾರಾಟದ ಅಂಗಡಿಯನ್ನೂ ಅವರು ನಡೆಸುತ್ತಿದ್ದರು.
ಹೃದಯ ಚಿಕಿತ್ಸೆಗೊಳಗಾಗಿದ್ದ ಮಂಜುನಾಥ ಕಳೆದ ಶನಿವಾರದಂದು ರಾತ್ರಿ ಕೀಟನಾಶಕವನ್ನು ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ತಕ್ಷಣ ಅವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರದಲ್ಲಿ ಅವರ ಆರೋಗ್ಯ
ಸುಧಾರಿಸದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಮಂಜುನಾಥ ಕೊನೆಯುಸಿರೆಳೆದರು.
ಅಸಹಜ ಸಾವಿನ ಪ್ರಕರಣದ ಮಾಹಿತಿ ಪಡೆದಿರುವ ಸಾಗರ ಗ್ರಾಮಾಂತರ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.