ಅಬಕಾರಿ ಡಿಸಿ, ಜಿಲ್ಲಾ ಆರೋಗ್ಯಾಧಿಕಾರಿಯಿಂದ ವಕೀಲ ಮೋಹನ್ ಕುಮಾರ್ ದಾನಪ್ಪಗೆ ಪ್ರಶಂಸೆ!

ಶಿವಮೊಗ್ಗ:- ಜೂಲೈ14 ರಂದು ಮಾದಕ ವಸ್ತು ವಿರುದ್ದ ಜಾಗೃತಿಗಾಗಿ ಶಿವಮೊಗ್ಗ ನಗರದಲ್ಲಿ 15 ಕಿ ಮೀ ಮ್ಯಾರಥಾನ್ ಮಾಡಿ ಜಾಗೃತಿ ಮೂಡಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರಿಗೆ ಶಿವಮೊಗ್ಗ ಅಬಕಾರಿ ಉಪ ಆಯುಕ್ತಕರಾದ ಕ್ಯಾಪ್ಟನ್ ಅಜಿತ್ ಕುಮಾರ್, ಜಿಎ ಮತ್ತು ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ರಾಜೇಶ್ ಸುರ್ಗಿಹಳ್ಳಿರವರು ಮೋಹನ್ ಕುಮಾರ್ ದಾನಪ್ಪನವರ ಸಾಮಾಜಿಕ ಕಳಕಳಿಯ ಕಾರ್ಯವನ್ನ ಅಭಿನಂದಿಸಿ ಜಿಲ್ಲಾಡಳಿತದಿಂದ ಪ್ರಶಂಸನೆ ಪತ್ರ ನೀಡಿ ಗೌರವಿಸಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಮಾದಕ ವಸ್ತುಗಳ ವ್ಯಸನಿತರಾಗಿದ್ದು ಮೋಹನ್ ಕುಮಾರ್ ದಾನಪ್ಪರವರು ಶಿವಮೊಗ್ಗ ನಗರದಾದ್ಯಂತ ಸುಮಾರು 15 ಕಿ.ಮೀ. ಉದ್ದದಷ್ಟು ಮ್ಯಾರಥಾನ್ ಓಟ ನಡೆಸಿರುವುದರೊಂದಿಗೆ “ಮಾದಕ ವಸ್ತುಗಳನ್ನು ಬೇಡ ಎನ್ನಿರಿ” ಎಂಬ ಘೋಷವಾಕ್ಯದೊಂದಿಗೆ ನಗರಾದದ್ಯಂತ ಜಾಗೃತಿ ಮೂಡಿಸಿ ಶ್ರಮಿಸಿರುವುದು ಶ್ಲಾಘನೀಯ.

ವಿಶೇಷ ಆಸಕ್ತಿಯಿಂದ ಯುವಕರಿಗೆ, ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಮಾದಕ ವಸ್ತುಗಳಿಂದಾಗುವ ಹಾನಿಯ ಕುರಿತು ಘೋಷಣೆಗಳನ್ನು ಕೂಗುತ್ತಾ ಜನಸ್ತೋಮಕ್ಕೆ ತಿಳಿವಳಿಕೆ ನೀಡಲು ವಿಭಿನ್ನ ರೀತಿಯಲ್ಲಿ ಸಾರ್ವಜನಿಕರ ಗಮನ ಸೆಳೆದಿರುತ್ತಾರೆ.
ಈ ಅರಿವು ನೀಡುವ ಮುಖಾಂತರ ಯುವಕರಿಗೆ, ಸಾರ್ವಜನಿಕರಿಗೆ ಆದರ್ಶವಾಗಿರುತ್ತಾರೆ. ಅವರ ಈ ಸಮಾಜಮುಖಿ ನಡೆಗೆ ಜಿಲ್ಲಾಡಳಿತದಿಂದ
ಶಿವಮೊಗ್ಗ ಅಬಕಾರಿ ಡಿಸಿ ಮತ್ತು ಡಿಹೆಚ್ಓ ರವರು ಅಭಿನಂದಿಸಿ ಪ್ರಶಂಸನೆ ಪತ್ರ ನೀಡಿ ಹಾರೈಸಿದ್ದಾರೆ
.

By admin

ನಿಮ್ಮದೊಂದು ಉತ್ತರ

You missed

error: Content is protected !!