ಶಿವಮೊಗ್ಗ, ಆ.26:
ತಾಯಿ ಸಿಗಂದೂರೇಶ್ವರಿ ಕೊರೊನಾ ಹಿನ್ನೆಲೆಯಲ್ಲಿ ಭಕ್ತರನ್ನೇ ನೀವು ಮನೆಯಲ್ಲಿರಿ. ನಿಮ್ಮನ್ನು ನಾ ಆಶೀರ್ವದಿಸುತ್ತೇನೆ ಎಂದರೂ ಸಿಕ್ಕ ಚಿಕ್ಕ ಅವಕಾಶದಲಿ ತಾಯಿಯ ಸನ್ನಿಗೆಗೆ ಹೋಗಿ ಬರುವ ಭಕ್ತರಿಗೇನೂ ಕಮ್ಮಿ ಇಲ್ಲ.
ಲಾಂಚ್ ನ ಸುಂದರ ಪ್ರಯಾಣ ಅನುಭವ ಹಾಗೂ ತಾಯಿಯ ದರುಶನ ಸೌಭಾಗ್ಯವೇ ಹೌದು. ಆದರೆ, ಲಾಂಚ್ ನಿಂದ ದೇವಾಲಯಕ್ಕೆ ಹೋಗಿ ಬರುವ ಮಾರ್ಗ ಮದ್ಯದಲ್ಲಿ ಜೀಪು ಚಾಲಕರು ಹಾಗೂ ಭಕ್ತ ಪ್ರವಾಸಿಗರು ಮಾರಾಮಾರಿ ಹೊಡೆದಾಡಿದ್ದಾಋ.
ಸಿಗಂಧೂರಿನ ಬೋಟ್ ಅಧವಾ ಅದರ ಮಗ್ಗುಲಲ್ಲಿ ಹೊಡೆದಾಟ ನಡೆದಿದೆ ಎನ್ನಲಾಗಿದೆ
ಪ್ರಯಾಣಿಕರ ಮತ್ತು ಸ್ಥಳೀಯ ಜೀಪ್ ಚಾಲಕರ ನಡುವೆ ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ.
ಸಿಗಂಧೂರಿನಿಂದ ವಾಪಾಸಾಗುವಾಗ ಜೀಪ್ ಚಾಲಕ ಮತ್ತು ಗದಗ ಪ್ರಯಣಿಕರ ನಡುವೆ ಗಲಾಟೆ ಆಗಿದೆ.
ಗದಗನಿಂದ ಬಂದ ಪ್ರಯಾಣಿಕರು ಕಳಸವಳ್ಳಿ ಲಾಂಚ್ ಏರಿ ಸಿಗಂಧೂರಿನ ಕಡೆ ಪ್ರಯಾಣಿಸುವ ವೇಳೆಯಲ್ಲಿ ಜೀಪ್ ವೊಂದರಲ್ಲಿ ಬಾಡಿಗೆ ವಿಚಾರಿಸಿದ್ದಾರೆ. ಬಾಡಿಗೆ ಫಿಕ್ಸ್ ಆದ ನಂತರ ಬೇರೆ ಆಟೋ ಏರಿ ದೇವಸ್ಥಾನವನ್ನ ನೋಡಿಕೊಂಡು ಬಂದಿದ್ದಾರೆ.
ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ನಿಷೇಧ ಏರಲಾಗಿದೆ. ಆದರೂ ದೇವಸ್ಥಾನದ ಬಳಿ ತೆರಳಿ ಕೆಲವು ಭಕ್ತರು ಕೈಮುಗಿದು ವಾಪಾಸಾಗುತ್ತಾರೆ. ಇದೇ ರೀತಿ ವಾಪಾಸಾಗುವ ವೇಳೆ ಬಾಡಿಗೆ ಜೀಪ್ ಚಲಾಯಿಸುವ ಕೆಲ ಸ್ಥಳೀಯರು ಈ ಗದಗನಿಂದ ಬಂದ ಪ್ರಯಾಣಿಕರನ್ನ ಬಾಡಿಗೆ ಮಾತನಾಡಿ ವಾಪಾಸಾಗಿದ್ದೀರಿ.
ನೀವು ಪ್ರಯಾಣಿಕರು ದೂರದ ಊರಿನಿಂದ ಬಂದು ನಮ್ಮನ್ನ ಜೋಕರ್ ಆಗಿ ಪರಿಗಣಿಸುತ್ತೀರೆಂದು ಹೊಡೆದಾಡಿಕೊಂಡಿರುವುದು ತಿಳಿದುಬಂದಿದೆ. ಆದರೆ ಈ ಕುರಿತು ಯಾರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ.
ಎಲ್ಲರದೂ ಇದೇ ಕಥೆ. ಒಂದೆಡೆ ಭಕ್ತಿ.. ಮತ್ತೊಂದೆಡೆ ಹೊಟ್ಟೆಪಾಡು. ಕೊರೊನಾ ಕಿಕ್ ಕೊಡ್ತಿದೆಯೋ ಅಥವಾ ಜನರೇ ಕಿಕ್ಕಾಗುತ್ತಿದ್ದಾರೋ ಆ ತಾಯಿಗೇ ಗೊತ್ತು.