ಶಿವಮೊಗ್ಗ, ಜು.೦೪:
ಸ್ಮಾರ್ಟ್ಸಿಟಿ ಕಚೇರಿ ಇರುವ ನೆಹರುರಸ್ತೆಯ ಫುಟ್ಪಾತ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಒತ್ತಾಯಿಸಿದೆ.

ನೆಹರು ರಸ್ತೆಯ ಸ್ಮಾರ್ಟ್ಸಿಗಟಿಯಿಂದ ನಿರ್ಮಿಸಿರುವ ಫುಟ್ಪಾತ್ ಕಾಮಗಾರಿ ಕಳಪೆ ಆಗಿರುವುದಕ್ಕೆ ಸಾಕ್ಷಿ ಆಗಿ ೩೬ ಫೋಟೋಗಳನ್ನು ಲಗತ್ತಿಸಿದ್ದೇವೆ. ಇವುಗಳಿಂದ ಸಾಬೀತಾಗುವುದೇನೆಂದರೆ ಇಡೀ ಫುಟ್ಬಾತ್ ಕಾಮಗಾರಿ ಮುಗಿದು ಐದು-ಆರು ತಿಂಗಳಲ್ಲೇ ಫುಟ್ಬಾತ್ಗೆಂ ಹಾಕಿರುವ ಟೈಲ್ ಕುಸಿದಿದೆ. ಹಾಗೆಯೇ ಸಿಮೆಂಟ್ ಕಾಮಗಾರಿಯ ಅತ್ಯಂತ ಅವೈಜ್ಞಾನಿಕ ಮತ್ತು ಕಳಪೆಯಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಕಾಮಗಾರಿ ಸಂಪೂರ್ಣ ತಗ್ಗು ಇಳಿತಗಳಿಂದ ಕೂಡಿದ್ದು, ಸ್ಮಾರ್ಟ್ಸಿಟಿಯನ್ನು ಅಣುಕಿಸುತ್ತಿದೆ. ಹಲವಾರು ಟೈಲ್ಗದಳು ಕಾಮಗಾರಿಗೆ ಮುನ್ನ ಹಾಳಾಗಿವೆ ಅಥವಾ ಬಿರುಕು ಬಿಟ್ಟಿವೆ. ಕಾಮಗಾರಿಗೂ ಮೊದಲು ೨೪x೭ ನೀರಿನ ಪೈಪುಗಳನ್ನು ಅಳವಡಿಸುವಂತೆ ನೋಡಿಕೊಳ್ಳುವುದನ್ನು ಬಿಟ್ಟು, ಓಡಾಡುವವರು ಬೀಳುವಂತೆ ಅಸಯ್ಯವಾಗಿ ಜೋಡಿಸಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ಫುಟ್ಬಾತ್ನುಲ್ಲಿ ಓಡಾಡುವುದೆ ದುಸ್ತರವಾಗಲಿದೆ ಎಂದು ಅಸಮಾಧಾನ ವ್ಯಕ್ಯಪಡಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್ಕುನಮಾರ್ ಶೆಟ್ಟಿ, ಪ್ರಮುಖರಾದ ಚಂದ್ರಶೇಖರ ಗೌಡ, ಚನ್ನವೀರಪ್ಪ ಗಾಮನಗಟ್ಟಿ, ನಾಗರಾಜ, ತಿಮ್ಮಣ್ಣ, ಸುಬ್ಬಣ್ಣ, ದೇವೇಂದ್ರ ಇನ್ನಿತರರು ಹಾಜರಿದ್ದರು.