ಶಿವಮೊಗ್ಗ, ಜು
ವಿವಿಧ ಅಪರಾಧ ಪ್ರಕರಣಗಳಲ್ಲಿ ರೌಡಿ ಶೀಟರ್ಗಳಾಗಿ ದಾಖಲಾಗಿರುವವರಿಗೆ ನಗರದ ಡಿಆರ್ ಮೈದಾನದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಲಕ್ಷ್ಮೀ ಪ್ರಸಾದ್ ಪರೇಡ್ ನಡೆಸಿದರು.

ಶಿವಮೊಗ್ಗ ಗ್ರಾಮಾಂತರ, ದೊಡ್ಡಪೇಟೆ, ಕೋಟೆ, ತುಂಗಾ ನಗರ, ವಿನೋಬನಗರ ಮತ್ತು ಜಯನಗರ ಪೊಲೀಸ್ ಠಾಣೆಗಳಲ್ಲಿರುವ 175 ರೌಡಿಗಳ ಪರೇಡ್ ನಡೆಸಿ, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರು ವವರಿಗೆ ಎಚ್ಚರಿಕೆ ನೀಡಿದರು.

ನಗರದ 6 ಠಾಣೆಗಳ ರೌಡಿ ಶೀಟರ್ಗಳಲ್ಲಿರುವ ಕೆಲ ರೌಡಿಗಳು ರೌಡಿ ಚಟುವಟಿಕೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳತ್ತಿರಲಿಲ್ಲ. ಅಂತಹವರಿಗೆ ಡಿಸೆಂಬರ್ವರೆಗೆ ಸಮಯ ನೀಡಲಾಗಿದೆ. ಬಳಿಕ ಅವರ ಚಲನವಲನ ಗಳನ್ನು ಗಮನಿಸಿಕೊಂಡು ರೌಡಿ ಶೀಟರ್ನಿಂದ ಕೈಬಿಡಬಹುದಾ ಅಥವಾ ಬೇಡವಾ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಗಾಂಜಾ ಪ್ರಕರಣಗಳಿಗೆ ಕಡಿವಾಣ ಹಾಕುವ ದೃಷ್ಟಿ ಯಿಂದ ಆ ಪ್ರಕರಣಗಳಲ್ಲಿ ಭಾಗಿಯಾಗಿರು ವವರಿಗೆ ಖಡಕ್ ಎಚ್ಚರಿಕೆ ನೀಡಲಾಗುತ್ತಿದೆ. ಜತೆಗೆ ಅವರ ಚಲನವಲನ ಸಹ ಗಮನಿಸಲಾಗಿದೆ ಎಂದು ತಿಳಿಸಿದರು.
ಇದುವರೆಗೂ ರೌಡಿ ಚಟುವಟಿಕೆ ಗಳಲ್ಲಿ ಗುರುತಿಸಿ ಕೊಂಡಿರುವ 9 ಜನರನ್ನು ಗಡಿಪಾರು ಮಾಡುವಂತೆ
ಉಪವಿಭಾಗಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ1400 ಕ್ಕೂ ಹೆಚ್ಚು ಗೂಂಡಾಗಳಿದ್ದಾರೆ. ಶಿವಮೊಗ್ಗ ಉಪವಿಭಾಗದಲ್ಲಿ ೮೦೦ ರೌಡಿಗಳಿದ್ದು, ಅದರಲ್ಲಿ ೬ ಪೊಲೀಸ್ ಠಾಣೆಗಳಿಂದ175 ರೌಡಿಗಳ ಪರೇಡ್ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.