ಶಿವಮೊಗ್ಗ, ಜು.೦೨:
9 ತಿಂಗಳಿಂದ 5 ವರ್ಷದ ಮಕ್ಕಳಿಗೆ ವಾರ್ಷಿಕ ಇನ್ಫ್ಲುಯೆನ್ಜಾ/ಫ್ಲೂ ಲಸಿಕೆಯನ್ನು ಹಾಕಿಸುವುದು ಸೂಕ್ತ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಶಿಫಾರಸು ಮಾಡಿವೆ,ಎಂದು ಸರ್ಜಿ ಆಸ್ಪತ್ರೆಯ ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.

ಮಕ್ಕಳು ವರ್ಷವಿಡೀ ಜ್ವರಕ್ಕೆ ತುತ್ತಾಗುತ್ತಾರೆ ಮತ್ತು ಚಳಿಗಾಲ ಹಾಗೂ ಮಳೆಗಾಲದ ಸಂದರ್ಭದಲ್ಲಿ ಜ್ವರ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗೆ ಜ್ವರ ಬಂದ ಸಂದರ್ಭದಲ್ಲಿ ಮಕ್ಕಳಲ್ಲಿ ಪ್ರತಿಕಾಯಗಳನ್ನು ಬೆಳೆಸಲು ಕನಿಷ್ಠ ಸುಮಾರು ೨ ವಾರಗಳು ಬೇಕಾಗುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಳೆಗಾಲ ಅಥವಾ ಚಳಿಗಾಲ ಆರಂಭದ ೨ ರಿಂದ ೪ ವಾರಗಳಿಗೆ ಮುನ್ನ ಲಸಿಕೆಯನ್ನು ಹಾಕಿಸುವುದು ಉತ್ತಮ

. ೫ ವರ್ಷದೊಳಗಿನ ಮಕ್ಕಳು ಜ್ವರದಿಂದ ಎದುರಾಗಬಹುದಾದ ಹೆಚ್ಚು ಅಪಾಯಗಳನ್ನು ಹೊಂದಿರುತ್ತಾರೆ. ಇದು ಸಮುದಾಯದ ಇತರರಿಗೂ ಸೋಂಕನ್ನು ಹರಡಿಸಬಹುದಾಗಿದೆ.

ಈ ವಾರ್ಷಿಕ ಲಸಿಕೆ ಪಡೆಯುವ ಅಗತ್ಯತೆ ಬಗ್ಗೆ ತಿಳಿಸಿರುವ ಅವರು ‘ಜ್ವರವು ಹೆಚ್ಚು ಸಾಂಕ್ರಾಮಿಕ ಸೋಂಕು ಆಗಿದೆ ಎಂದು ತಿಳಿದಿದ್ದಾರೆ.