ಶಿವಮೊಗ್ಗ,
ಯಾವುದೇ ರೀತಿಯ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಮರ್ಪಕ ವಾಗಿ ಅಂಕಿಅಂಶಗಳ ಬಳಕೆ ಮಾಡುವು ದನ್ನು ಕರಗತ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ಭಾರತದ ಸಾಂಖ್ಯಿಕ ಪಿತಾಮಹ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಪಿ.ಸಿ.ಮಹಾಲನೋಬಿಸ್ ಇವರ ಜನ್ಮದಿನಾಚರಣೆ ಪ್ರಯುಕ್ತ ಆಚರಿಸಲಾಗು ತ್ತಿರುವ ಸಾಂಖ್ಯಿಕ ದಿನಾಚರಣೆ ಅಂಗವಾಗಿ ಜಿ.ಪಂ ಅಬ್ದುಲ್ ನಜೀರ‍್ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಶಿಕ್ಷಣ, ಆರೋಗ್ಯ, ಪೌಷ್ಟಿಕತೆ’ ವಿಷಯ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಾನಂತರ ದೇಶದ ಎದುರಿಗಿದ್ದ ಸವಾಲು ಆಹಾರ. ಹಸಿವುಮುಕ್ತ ದೇಶವನ್ನಾಗಿ ಸಲು ಸಹಕರಿಸಿದ್ದು ಅಂಕಿಅಂಶ ಆಧಾರಿತ ಯೋಜನೆಗಳು. ಹೀಗೆ ಯಾವುದೇ ಯೋಜನೆ ರೂಪಿಸಲು ಮೊದಲು ನಮಗೆ ನಿಖರವಾದ ಅಂಕಿಅಂಶಗಳು ಬೇಕು. ಇಂತಹ ಅಂಕಿಅಂಶಗಳನ್ನು ಹೇಗೆ ಸಂಗ್ರಹಿಸ ಬೇಕು, ಹೇಗೆ ಬಳಕೆ ಮಾಡಬೇಕೆಂಬುದನ್ನು ತೋರಿಸಿಕೊಟ್ಟ ಉನ್ನತ ವ್ಯಕ್ತಿ ಪ್ರೊ.ಪಿ.ಸಿ. ಮಹಾಲನೋಬಿಸ್. ಪಂಚವಾರ್ಷಿಕ ಯೋಜನೆಗಳು ಸೇರಿದಂತೆ ಬಹಳಷ್ಟು ಕೊಡುಗೆ ದೇಶಕ್ಕೆ ಅವರು ನೀಡಿದ್ದಾರೆ.
ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ನಮ್ಮ ಇಲಾಖೆ ಕಾರ್ಯ ಕ್ರಮಗಳ ಮೂಲಕವೇ ಹೇಗೆ ಅಂಕಿ ಅಂಶಗಳ ಮೂಲಕ ಸುಸ್ಥಿರ ಅಭಿವೃದ್ದಿ ಸಾಧಿಸಬಹುದೆಂದು ಅನೇಕ ವೇಳೆ ಕಂಡುಕೊಂಡಿದ್ದೇವೆ. ನಿಖರವಾದ ಮತ್ತು ನೈಜವಾದ ಅಂಕಿಅಂಶಗಳ ಸಂಗ್ರಹ ಮತ್ತು ಅದರ ಮೇಲಿನ ವಿಶ್ಲೇಷಣೆಯಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕೆಂದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಉಮಾ ಟಿ ಎಸ್ ಮಾತನಾಡಿ, ಸುಸ್ಥಿರ ಅಭಿ ವೃದ್ದಿ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸರ್ಕಾರದ ವಿವಿಧ ಯೋಜನೆಗಳನ್ನು ರೂಪಿಸುತ್ತೇವೆ. ಯೋಜನೆ ರೂಪಿಸಲು ಮುಖ್ಯ ಆಧಾರ ಅಂಕಿಅಂಶಗಳು. ನಿಖರ ವಾದ ಅಂಕಿಅಂಶಗಳನ್ನಿಟ್ಟುಕೊಂಡು ದೂರ ದೃಷ್ಟಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಅಂಕಿಅಂಶ ಸಂಗ್ರಹ ಮತ್ತು ನಿರ್ವಹಣೆಯನ್ನು ಇನ್ನಷ್ಟು ಗಟ್ಟಿಗೊಳಿಸಿ, ಅಭಿವೃದ್ದಿ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಶ್ರಮಿಸೋಣ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶ ಕಂಡ ಶ್ರೇಷ್ಟ ಸಂಖ್ಯಾಶಾಸ್ತ್ರಜ್ಞರಾದ ಪ್ರೊ.ಪಿ.ಸಿ.ಮಹಾನೋಬಿಸ್‌ರವರು ಪ್ರಥಮ ಬಾರಿಗೆ ೧೯೩೧ ರಲ್ಲಿ ಸಂಖ್ಯಾಶಾಸ್ತ್ರವನ್ನು ಪರಿಚಯಿಸಿದರು. ದೇಶದ ಅಭಿವೃದ್ದಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಲು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಅನೇಕ ಸಮೀಕ್ಷೆಗಳನ್ನು ಕೈಗೊಂಡರು ಎಂದರು.
ತಾಲ್ಲೂಕು ಅಭಿವೃದ್ದಿ ಅಧಿಕಾರಿ ಸುರೇಶ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ ಆರೋಗ್ಯ ಕುರಿತು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗೂಬಾಯಿ ಇವರು ಪೌಷ್ಟಿಕತೆ ಕುರಿತು ಮಾತನಾಡಿ, ಅಂಕಿಅಂಶಗಳಾಧಾರಿತ ವಿವಿಧ ಯೋಜನೆಗಳು ಮತ್ತು ಅಭಿಯಾನದ ಮೂಲಕ ಸುಸ್ಥಿರ ಅಭಿವೃದ್ದಿ ಸಾಧಿಸಲಾಗು ತ್ತಿದೆ ಎಂಬುದನ್ನು ವಿವರಿಸಿದರು.