ಶಿವಮೊಗ್ಗ, ಜೂ.28:
ನಗರದ ಹೊರವಲಯದಲ್ಲಿ ಗಾಂಜಾ ಮಾರಾಟ ಹೆಚ್ಚುತ್ತಿದ್ದು, ಸದ್ದಿಲ್ಲದ ಸ್ಥಳಗಳಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಗೆ ಈಗೊಂದು ಸಣ್ಣ ಬ್ರೇಕಪ್ ಸಿಕ್ಕಿದೆ.
ವಿವರ:
ನಿನ್ನೆ ಮಧ್ಯಾಹ್ನ ಶಿವಮೊಗ್ಗ ನಗರದ ಊರುಗಡೂರು ಬಳಿಯಲ್ಲಿ ಸೂಡಾದಿಂದ ನಿರ್ಮಿಸುತ್ತಿರುವ ಖಾಲೀ ಲೇ ಔಟ್ ನಲ್ಲಿ 04 ಜನರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ಸಿಇಎನ್, ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿತರಾದ 1) ತಿಲಕ್, 23 ವರ್ಷ, ಬುದ್ಧಾನಗರ ಶಿವಮೊಗ್ಗ, 2) ಮಹಮ್ಮದ್ ಗೌಸ್, 21 ವರ್ಷ, ಹೊಸೂರು ಗ್ರಾಮ, ಆಯನೂರು, 3) ಮಂಜುನಾಥ, 20 ವರ್ಷ, ಕೋಟೆ ಹಾಳ್, ಚೋರಡಿ ಮತ್ತು 4) ಸುಮನ್, 23 ವರ್ಷ, ಸಾದತ್ ಕಾಲೋನಿ, ಭದ್ರಾವತಿ ಅವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 30,000/- ರೂ ಗಳ ಒಟ್ಟು 1 ಕೆಜಿ, 250 ಗ್ರಾಂ ತೂಕದ ಒಣ ಗಾಂಜಾ ಮತ್ತು ಮೊಬೈಲ್ ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಸಿಇಎನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0042/2022 ಕಲಂ 20(b) (ii) B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.