ನವದೆಹಲಿ,
ಜುಲೈ1 ರಿಂದ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ. ಕೆಲಸದ ಅವಧಿ, ವಾರದ ರಜೆ, ಭವಿಷ್ಯನಿಧಿ ಕೊಡುಗೆ ಮತ್ತು ಕೈಗೆ ಸಿಗುವ ವೇತನ ಮೊತ್ತದಲ್ಲಿ ಭಾರಿ ಬದಲಾವಣೆಯಾಗಲಿದೆ.
ಹೊಸ ಕಾರ್ಮಿಕ ನೀತಿ ಜಾರಿಗೆ ೨೩ ರಾಜ್ಯಗಳು ಸಮ್ಮತಿಸಿವೆ.
ಹೊಸ ಕಾರ್ಮಿಕ ನೀತಿಯ ಪ್ರಕಾರ, ಪ್ರಸ್ತುತ ಇರುವ ಕೆಲಸದ ಅವಧಿಯನ್ನು ೯ ಗಂಟೆಯಿಂದ ೧೨ ಗಂಟೆಗೆ ಹೆಚ್ಚಳ ಮಾಡಲಾಗಿದೆ. ವಾರಕ್ಕೆ ಮೂರು ದಿನ ರಜೆ, ನಾಲ್ಕು ದಿನ ಕೆಲಸ ನಿರ್ವಹಿಸುವ ಪ್ರಸ್ತಾಪವಿದೆ. ಕೆಲಸ ಮಾಡುವ ದಿನಗಳು ಕಡಿಮೆಯಾಗಿದ್ದರೂ ವಾರದ ಕೆಲಸದ ಅವಧಿ ಹಿಂದಿನಷ್ಟೇ ೪೮ ಗಂಟೆಗಳ ಕಾಲ ಇರಲಿದೆ.
ಟೇಕ್ ಹೋಮ್ ಸ್ಯಾಲರಿ ಕಡಿಮೆಯಾಗಲಿದೆ. ಪಿಎಫ್ ಕೊಡುಗೆ ಹೆಚ್ಚಾಗಲಿದೆ. ಒಟ್ಟು ವೇತನದಲ್ಲಿ ಬೇಸಿಕ್ ಶೇ.೫೦ ರಷ್ಟಾದರೂ ಇರಬೇಕು
. ಇದರಿಂದ ಪಿಎಫ್ ಕೊಡುಗೆ ಮೊತ್ತ ಹೆಚ್ಚಾಗಲಿದೆ. ಟೇಕ್ ಹೋಮ್ ಸ್ಯಾಲರಿ ಮೊತ್ತ ಕಡಿಮೆಯಾಗಿ ಉಳಿತಾಯ ಮೊತ್ತ ಜಾಸ್ತಿಯಾಗಲಿದೆ. ಗ್ರಾಚುಟಿ ಮೊತ್ತ ಮತ್ತು ನಿವೃತ್ತಿ ಕೊಡುಗೆಗಳ ಮೊತ್ತದಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.