ಶಿವಮೊಗ್ಗ, ಜೂ.24:
Tungataranga News
ಇಲ್ಲಿಗೆ ಸಮೀಪದ ಪುಟ್ಟಪ್ಪನ ಕ್ಯಾಂಪ್ ಬಳಿಯ ತುಂಗಾ ನದಿಯಲ್ಲಿ ಈಜಾಟದ ಸ್ನಾನಕ್ಕೆ ಹೋದ ಮಕ್ಕಳ ನಡುವೆ ಸೂಳೆಬೈಲಿನ 16 ವರ್ಷದ ಬಾಲಕ ನೀರು ಪಾಲಾಗಿರುವ ಘಟನೆ ನಡೆದಿದೆ.
ಆತನ ಪತ್ತೆಗಾಗಿ ತೀವ್ರ ಶೋಧಕಾರ್ಯ ನಡೆಯುತ್ತಿದೆ. ಆತ ಸಹಾಯಕ್ಕೆ ಅರಚಿದರೂ ತಮಾಷೆ ಮಾಡುತ್ತಿದ್ದಾನೆಂದು ಸಹಪಾಟಿಗಳು ತೋರಿದ ನಿರ್ಲಕ್ಷ್ಯಕ್ಕೆ ಆ ಬಾಲಕ ತುಂಗೆಗೆ ಬಲಿಯಾಗಿದ್ದಾನೆ.
ನಿನ್ನೆ ಮಧ್ಯಾಹ್ನ ಸೂಳೆಬೈಲಿನ ನಿವಾಸಿ ಅಬ್ದುಲ್ ರಿಹಾನ್ ಎಂಬ ಪ್ರಸಕ್ತ sslc ಪರೀಕ್ಷೆ ಬರೆದಿದ್ದ ಬಾಲಕ ನಾಲ್ವರು ಸ್ನೇಹಿತರೊಂದಿಗೆ ಪುಟ್ಟಪ್ಪನ ಕ್ಯಾಂಪ್ ಬಳಿ ತುಂಗಾ ನದಿಗೆ ಸ್ನಾನಕ್ಕೆ ತೆರಳಿದ್ದಾನೆ. ನಾಲ್ವರು ಸ್ನೇಹಿತರು ಎದ್ದು ದಡಕ್ಕೆ ತೆರಳಲು ಮುಂದಾಗಿದ್ದಾರೆ.
ಈ ವೇಳೆ ಅಬ್ದುಲ್ ರಿಹಾನ್ ಕೈಚಾಚಿದ್ದು ನನ್ನ ಮೇಲಕ್ಕೆ ಎತ್ತಿ ಎಂದು ಕೇಳಿದ್ದಾನೆ. ರಿಹಾನ್ ತಮಾಷೆ ಮಾಡುತ್ತಿದ್ದಾನೆ ಎಂದು ಗದರಿಸಿ ಮೇಲೆ ಬಾ ತಮಾಷೆ ಮಾಡಬೇಡ ಎಂದಿದ್ದಾರೆ. ಆದರೆ ಆ ಕ್ಷಣ ಮಾತ್ರದಲ್ಲಿ ನೀರಿನಲ್ಲಿ ಮುಳುಗಿದ್ದಾನೆ ಎಂದು ಮಕ್ಕಳು ಹೇಳಿದ್ದಾರೆ.
ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ನಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿಯ ವರೆಗೂ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕದಳ ಇಂದು ಬೆಳಿಗ್ಗೆ ಮತ್ತೆ ಶೋಧಕಾರ್ಯ ಮುಂದುವರೆಸಿದ್ದಾರೆ. ತುಂಗಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉಂಬ್ಳೆಬೈಲು ಸರ್ಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದಿದ್ದ ರಿಹಾನ್ ಮಾರ್ಚ್ ತಿಂಗಳಲ್ಲಿ ಬರೆದ ಪರೀಕ್ಷೆಯಲ್ಲಿ ಒಂದರಲ್ಲಿ ಫೇಲ್ ಆಗಿದ್ದನಂತೆ. ಇಂದು ಆತ ಪರೀಕ್ಷೆ ಬರೆಯಬೇಕಿತ್ತು. ಆದರೆ ವಿಧಿ ಆತನನ್ನ ನೀರಿನಲ್ಲಿ ಮುಳುಗಿಸಿದೆ.


